HomeUncategorizedವಿಜಯ್ ರೀತಿ ಸಿಎಂ ಆಗುವ ತಾಕತ್ತು ಕರ್ನಾಟಕದ ಹೀರೊಗಳಲ್ಲಿ ಡಿ ಬಾಸ್‌ಗೆ ಮಾತ್ರ ಇರೋದು; ಸಾಮಾಜಿಕ...

ವಿಜಯ್ ರೀತಿ ಸಿಎಂ ಆಗುವ ತಾಕತ್ತು ಕರ್ನಾಟಕದ ಹೀರೊಗಳಲ್ಲಿ ಡಿ ಬಾಸ್‌ಗೆ ಮಾತ್ರ ಇರೋದು; ಸಾಮಾಜಿಕ ಜಾಲತಾಣದಲ್ಲಿ ಶುರು ಜಪ

ನಿನ್ನೆ ( ಮೇ 4 ) ಪಂಚ ರಾಜ್ಯಗಳ ಚುನಾವಣೆಗಳ ಫಲಿತಾಂಶ ಹೊರಬಿದ್ದವು. ತಮಿಳುನಾಡಿನಲ್ಲಿ ಬಹುತೇಕರು ಊಹಿಸಿರದ ಫಲಿತಾಂಶ ಹೊರಬಿತ್ತು. ಆಡಳಿತಾರೂಢ ಡಿಎಂಕೆ ಸೋಲುಂಡಿತು. ಎರಡು ವರ್ಷಗಳ ಹಿಂದಷ್ಟೇ ಸ್ಥಾಪಿತವಾದ ತಮಿಳನ್ ವೆಟ್ರಿ ಕಳಗಮ್ 108 ಸೀಟುಗಳನ್ನು ಗೆಲ್ಲುವ ಮೂಲಕ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿತು.

ಈ ಮೂಲಕ ಈ ಹಿಂದೆ ಎಂಜಿಆರ್ ತಮಿಳುನಾಡಿನಲ್ಲಿ ಸ್ಪರ್ಧಿಸಿದ ಮೊದಲ ಚುನಾವಣೆಯಲ್ಲೇ ಗೆಲುವನ್ನು ದಾಖಲಿಸುವ ಮೂಲಕ ಬರೆದಿದ್ದ ಇತಿಹಾಸವನ್ನು ಮರುಕಳಿಸುವಂತೆ ಮಾಡಿದ್ದಾರೆ ದಳಪತಿ ವಿಜಯ್.

ಇನ್ನು ವಿಜಯ್ ಚುನಾವಣೆಗೆ ಸ್ಪರ್ಧಿಸುವುದಾಗಿ ಘೋಷಿಸಿದಾಗ ಬಲಿಷ್ಠ ಡಿಎಂಕೆ ಮುಂದೆ ಸಿನಿಮಾದವನು ಏನು ಮಾಡಲು ಸಾಧ್ಯ ಎಂದೇ ಬಹುತೇಕರು ಟೀಕಿಸಿದ್ದರು. ಸಿನಿಮಾದಲ್ಲಿ ಡೈಲಾಗ್ ಹೊಡೆದಷ್ಟು ಸುಲಭವಲ್ಲ ಚುನಾವಣೆ ಎಂದು ಎಚ್ಚರಿಸಿದ್ದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಆದರೆ ಸಿನಿಮೀಯ ರೀತಿಯೇ ವಿಜಯ್ ತಮಿಳುನಾಡಿನಲ್ಲಿ ವಿಜಯ ಪತಾಕೆಯನ್ನು ಹಾರಿಸಿ ಎಲ್ಲ ಟೀಕೆಗಳಿಗೂ ಉತ್ತರ ಕೊಟ್ಟಿದ್ದಾರೆ. ಹೀಗೆ ವಿಜಯ್ ಗೆಲುವು ಕಾಣುತ್ತಿದ್ದಂತೆಯೇ ಕರ್ನಾಟಕದಲ್ಲಿ ಏಕೆ ಈ ರೀತಿ ಸ್ಟಾರ್‌ಗಳು ರಾಜಕಾರಣಿಯಾಗಿ ಯಶಸ್ವಿಯಾಗಲು ಸಾಧ್ಯವಾಗಲಿಲ್ಲ ಎಂಬ ಚರ್ಚೆಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.

ಇದೇ ವೇಳೆ ಕೆಲ ನೆಟ್ಟಿಗರು ವಿಜಯ್ ರೀತಿ ಕರ್ನಾಟಕದ ಹೀರೊಗಳ ಪೈಕಿ ಚುನಾವಣೆಯಲ್ಲಿ ಸ್ಪರ್ಧಿಸಿ ಮುಖ್ಯಮಂತ್ರಿಯಾಗುವ ತಾಕತ್ತು ಇರುವ ಏಕೈಕ ನಟನೆಂದರೆ ಅದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಎಂದು ಟ್ವೀಟ್ ಮಾಡಿದ್ದಾರೆ. ಮಂಡ್ಯದಲ್ಲಿ ಸುಮಲತಾ ಅಂಬರೀಶ್ ಸ್ಪರ್ಧೆ ಮಾಡಿದ್ದಾಗ ಪ್ರಚಾರ ಮಾಡಿದ್ದ ಇದೇ ದರ್ಶನ್ ಅವರ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಹೀಗಾಗಿ ದರ್ಶನ್‌ಗೆ ವಿಜಯ್ ರೀತಿ ರಾಜಕಾರಣಿಯಾಗುವ ಸಾಮರ್ಥ್ಯವಿದೆ ಎಂದಿದ್ದಾರೆ.

ಇದಕ್ಕೆ ಟೀಕಾತ್ಮಕ ಉತ್ತರಗಳೂ ಸಹ ವ್ಯಕ್ತವಾಗಿದ್ದು, ಸದ್ಯ ಜೈಲಿನಲ್ಲಿರುವ ದರ್ಶನ್‌ಗೆ ಆಚೆ ಬರುವ ಅವಕಾಶವಿದೆಯಾ ನೋಡಿ, ಬಳಿಕ ಸಿಎಂ ಮಾತು ಎಂದು ಕಾಲೆಳೆದಿದ್ದಾರೆ.

For Latest News Updates, Join Our Whatsapp Community🚩
Srinivasa A Kollegala
Srinivasa A Kollegala
Srinivasa A has over 6 years of experience in journalism. He has worked as a Social Media Executive at OneIndia, Sub-Editor at MyKhel and Filmibeat Kannada, and led the digital team at Andolana newspaper as Digital Head.
RELATED ARTICLES

LEAVE A REPLY

Please enter your comment!
Please enter your name here

Most Popular