ಕೇಡು ಬಯಸುವವರನ್ನು ಚಾಮುಂಡೇಶ್ವರಿ ನೋಡಿಕೊಳ್ಳುತ್ತಾಳೆ: ದರ್ಶನ್ ವಿರೋಧಿಗಳ ಮೇಲೆ ವಿಜಯಲಕ್ಷ್ಮಿ ಆಕ್ರೋಶ

ಬೆಂಗಳೂರು: ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧಿತರಾಗಿ ಜೈಲು ಸೇರಿರುವ ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಕೇಡು ಬಯಸುವವರನ್ನು ಚಾಮುಂಡೇಶ್ವರಿ ನೋಡಿಕೊಳ್ಳುತ್ತಾಳೆ ಎಂದು ಹೇಳಿದ್ದಾರೆ.

ದರ್ಶನ್ ಅಭಿಮಾನಿಗಳಿಗೆ ಶಾಂತಿಯಿಂದ ಇರಲು ಅವರು ಮನವಿ ಮಾಡಿದ್ದಾರೆ. ದರ್ಶನ್ ಅವರ ಅನುಭವಿಸ್ಥಿತಿಯನ್ನು ದುರುಪಯೋಗಪಡಿಸಿಕೊಂಡು ಅವರಿಗೆ ಕೇಡುಬಯಸುವವರನ್ನು ತಾಯಿ ಚಾಮುಂಡೇಶ್ವರಿ ನೋಡಿಕೊಳ್ಳುತ್ತಾಳೆ ಎಂದು ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಬಂಧಿತರಾಗಿ ಜೈಲಿಗೆ ಹೋದ ನಂತರ ಪತಿಯ ಪರವಾಗಿ ಧ್ವನಿ ಎತ್ತಿದ್ದಾರೆ.

ಇದು ನಮಗೆಲ್ಲ ಪರೀಕ್ಷೆಯ ಸಮಯವಾಗಿದ್ದು, ನಾವು ತಾಳ್ಮೆ ಕಳೆದುಕೊಂಡು ಮಾತನಾಡುವುದರಿಂದ ನಮಗೆ ಹಾನಿಯಾಗುತ್ತದೆ. ತಾಳ್ಮೆ, ಶಾಂತಿಯಿಂದ ಇರೋಣ. ದರ್ಶನ್ ಅವರಿಗೆ ತಮ್ಮ ಅಭಿಮಾನಿಗಳು ಎಂದರೆ ಅಪಾರ ಪ್ರೀತಿ. ಅವರು ತಮ್ಮ ಸೆಲೆಬ್ರಿಟಿಗಳನ್ನು ಹೃದಯದಲ್ಲಿಯೇ ಹೊತ್ತಿರುವುದು ನಿಮಗೆ ಗೊತ್ತಿದೆ. ನಿಮ್ಮ ಆತಂಕವನ್ನು ನಾನು ದರ್ಶನ್ ಅವರಿಗೆ ತಲುಪಿಸಿದ್ದೇನೆ. ಅವರು ಕೂಡ ಕಾಳಜಿ ವ್ಯಕ್ತಪಡಿಸಿದ್ದಾರೆ. ನಾವು ನ್ಯಾಯಾಲಯಗಳ ಮೇಲೆ ವಿಶ್ವಾಸ ಇಡೋಣ. ನ್ಯಾಯ ಸಿಗುವ ಸಂಪೂರ್ಣ ಭರವಸೆ ಇದೆ. ಒಳ್ಳೆಯ ಸಮಯ ಮತ್ತೆ ಮರಳಿ ಬರುತ್ತದೆ ಎಂದು ತಿಳಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read