ರೇಣುಕಾ ಸ್ವಾಮಿ ಕೊಲೆ ಪ್ರಕರಣ: ನಟ ದರ್ಶನ್ ಗೆ ಮತ್ತೊಂದು ಬಿಗ್ ಶಾಕ್

ಬೆಂಗಳೂರು: ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ದರ್ಶನ್ ಆಪ್ತ ಪಟ್ಟಣಗೆರೆ ವಿನಯ್ ಮೊಬೈಲ್ ನಲ್ಲಿ ಬಹು ಮುಖ್ಯವಾದ ಸಾಕ್ಷ್ಯವನ್ನು ಪೊಲೀಸರು ಜಪ್ತಿ ಮಾಡಿದ್ದು, ಇದು ಅವರಿಗೆ ಕಂಟಕವಾಗಿದೆ ಎಂದು ಹೇಳಲಾಗಿದೆ.

ಪಟ್ಟಣಗೆರೆ ವಿನಯ್ ಮೊಬೈಲ್ ನಲ್ಲಿ ಅತಿಮುಖ್ಯ ಸಾಕ್ಷಾಧಾರ ದೊರೆತಿದೆ. ಅದನ್ನು ಕಳುಹಿಸಿದ ವ್ಯಕ್ತಿ ಯಾರು ಎಂಬುದರ ಬಗ್ಗೆ ವಿನಯ್ ಉಪಸ್ಥಿತಿಯಲ್ಲಿ ವಿಚಾರಣೆ ನಡೆಸಬೇಕಿದ್ದು ವಿನಯ್ ನನ್ನು ಪೊಲೀಸ್ ಕಸ್ಟಡಿಗೆ ನೀಡುವಂತೆ ಕೋರ್ಟ್ ಗೆ ಮನವಿ ಮಾಡಿದ್ದು, ಮನವಿ ಪುರಸ್ಕರಿಸಿದ ಕೋರ್ಟ್ ಪೊಲೀಸ್ ಕಸ್ಟಡಿಗೆ ನೀಡಿದೆ. ರೇಣುಕಾ ಸ್ವಾಮಿ ಮೇಲೆ ದೈಹಿಕ ಹಲ್ಲೆ ಮತ್ತು ಹಲ್ಲೆಯ ನಂತರ ಮೃತಪಟ್ಟ ವಿಡಿಯೋವನ್ನು ವಿನಯ್ ಗೆ ದರ್ಶನ್ ಸಹಚರರು ಕಳುಹಿಸಿದ್ದರು ಎನ್ನಲಾಗಿದೆ.

ಇನ್ನು ದರ್ಶನ್ ಹಾಗೂ ಸಹಚರರ ವಿರುದ್ಧ ಅಪರಾಧಿಕ ಸಂಚು ಸೇರಿದಂತೆ ಇತರೆ ಐಪಿಸಿ ಸೆಕ್ಷನ್ ಗಳನ್ನು ಪೊಲೀಸರು ಸೇರಿಸಿದ್ದಾರೆ. ರೇಣುಕಾ ಸ್ವಾಮಿ ಮೃತ ದೇಹದ ಮೇಲಿನ ಗಾಯದ ಗುರುತು ಆಧರಿಸಿ ಕಾಮಾಕ್ಷಿಪಾಳ್ಯ ಠಾಣೆಯಲ್ಲಿ ಐಪಿಸಿ 302ರ ಅಡಿ ಕೊಲೆ ಪ್ರಕರಣ ದಾಖಲಿಸಲಾಗಿದೆ. ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಕೊಲೆ ಕೃತ್ಯದ ಹಿಂದಿನ ಸಂಚು ಬಯಲಾಗಿದ್ದು, ಅಂತೆಯೇ ಐಪಿಸಿ 120 ಬಿ ಅಪರಾಧಿಕ ಸಂಚು, ಐಪಿಸಿ 355 ಹಲ್ಲೆಗೆ ಪ್ರಚೋದನೆ, ಐಪಿಸಿ 384 ದೌರ್ಜನ್ಯ, ಐಪಿಸಿ 364 ಅಪಹರಣಮ ಐಪಿಸಿ 201 ಸಾಕ್ಷ್ಯ ನಾಶ ಸೇರಿದಂತೆ ಇತರೆ ಹೆಚ್ಚುವರಿ ಆರೋಪಗಳನ್ನು ನ್ಯಾಯಾಲಯದ ಅನುಮತಿ ಪಡೆದು ಪೊಲೀಸರು ಸೇರ್ಪಡೆಗೊಳಿಸಿದ್ದಾರೆ. ಇದರಿಂದಾಗಿ ದರ್ಶನ್ ಮತ್ತು ಸಹಚರರಿಗೆ ಈ ಪ್ರಕರಣ ಕಂಟಕವಾಗಿದೆ ಎನ್ನಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read