HomeEntertainmentBIG NEWS: ಅಮ್ಮನಿಗಾಗಿ ಜೈಲಿನಲ್ಲಿ ನಟ ದರ್ಶನ್ ಕನವರಿಕೆ: ಮಗನನ್ನು ನೋಡಲು ಬಳ್ಳಾರಿ ಜೈಲಿಗೆ ಬಂದ...

BIG NEWS: ಅಮ್ಮನಿಗಾಗಿ ಜೈಲಿನಲ್ಲಿ ನಟ ದರ್ಶನ್ ಕನವರಿಕೆ: ಮಗನನ್ನು ನೋಡಲು ಬಳ್ಳಾರಿ ಜೈಲಿಗೆ ಬಂದ ತಾಯಿ ಮೀನಾ

ಬಳ್ಳಾರಿ: ಕೊಲೆ ಕೇಸ್ ನಲ್ಲಿ ಜೈಲು ಸೇರಿರುವ ನಟ ದರ್ಶನ್, ಬಳ್ಳಾರಿ ಜೈಲಿನಲ್ಲಿ ಅಮ್ಮನಿಗಾಗಿ ಕನವರಿಸುತ್ತಿದ್ದರು. ಮಗನ ಭೇಟಿಗೆಂದು ದರ್ಶನ್ ತಾಯಿ ಮೀನಾ ತೂಗುದೀಪ್ ಬಳ್ಳಾರಿ ಜೈಲಿಗೆ ಆಗಮಿಸಿದ್ದಾರೆ.

ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಬಳ್ಳಾರಿ ಜೈಲು ಸೇರಿರುವ ನಟ ದರ್ಶನ್, ಪ್ರತಿಬಾರಿ ಪತ್ನಿ ವಿಜಯಲಕ್ಷ್ಮೀ ಭೇಟಿಯಾದಾಗ ಅಮ್ಮ ಬರಲಿಲ್ವಾ? ಎಂದು ಕೇಳುತ್ತಿದ್ದರಂತೆ. ಅಮ್ಮನಿಗಾಗಿ ಹಲವು ಬಾರಿ ಕನವರಿಸಿದ್ದರಂತೆ. ಈ ಹಿನ್ನೆಲೆಯಲ್ಲಿ ದರ್ಶನ್ ತಾಯಿ ಮೀನಾ ಇಂದು ಬಳ್ಳಾರಿ ಜೈಲಿಗೆ ಭೇಟಿ ನೀಡಿದ್ದಾರೆ.

ತಾಯಿ ಮೀನಾ ತೂಗುದೀಪ್ ಜೊತೆ ದರ್ಶನ್ ಸಹೋದರಿ, ಭಾವ ಕೂಡ ಬಳ್ಳಾರಿ ಜೈಗೆ ಆಗಮಿಸಿದ್ದು, ಕೊಲೆ ಆರೋಪಿ ದರ್ಶನ್ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

 

For Latest News Updates, Join Our Whatsapp Community🚩
RELATED ARTICLES

Most Popular