HomeEntertainmentಪದೇ ಪದೇ ಅಸಭ್ಯ ವರ್ತನೆ, ಟಿವಿಗಾಗಿ ಕಿರಿಕಿರಿ; ದರ್ಶನ್ ಗೆ ವಾರ್ನಿಂಗ್ ಕೊಟ್ಟ ಜೈಲಾಧಿಕಾರಿಗಳು

ಪದೇ ಪದೇ ಅಸಭ್ಯ ವರ್ತನೆ, ಟಿವಿಗಾಗಿ ಕಿರಿಕಿರಿ; ದರ್ಶನ್ ಗೆ ವಾರ್ನಿಂಗ್ ಕೊಟ್ಟ ಜೈಲಾಧಿಕಾರಿಗಳು

ಬಳ್ಳಾರಿ: ಕೊಲೆ ಕೇಸ್ ನಲ್ಲಿ ಜೈಲು ಸೇರಿದರೂ ನಟ ದರ್ಶನ್ ದುರ್ನಡತೆ ತಿದ್ದಿಕೊಂಡಿಲ್ಲ. ಬಳ್ಳಾರಿ ಜೈಲಿನಲ್ಲಿ ದರ್ಶನ್ ಪದೇ ಪದೇ ಅಸಭ್ಯ ವರ್ತನೆ ತೋರುತ್ತಿದ್ದು, ಜೈಲಿನ ಸಿಬ್ಬಂದಿಗಳು ಬೇಸತ್ತು ಹೋಗಿದ್ದಾರೆ ಎನ್ನಲಾಗುತ್ತಿದೆ.

ದುರಹಂಕಾರ, ದರ್ಪದಿಂದ ಪದೇ ಪದೇ ದರ್ಶನ್ ಜೈಲಿನಲ್ಲಿಯೂ ಅಸಭ್ಯವಾಗಿ ವರ್ತಿಸುತ್ತಿದ್ದಾನೆ. ಅಲ್ಲದೇ ಟಿವಿ ವ್ಯವಸ್ಥೆ ಮಾಡಿಲ್ಲ ಎಂದು ಕಿರಿಕಿರಿ ನೀಡುತ್ತಿದ್ದು, ಇದರಿಂದ ರೋಸಿ ಹೋಗಿರುವ ಜೈಲಾಧಿಕಾರಿಗಳು ಜೈಲಿನ ನಿಯಮ ಪಾಲಿಸುವಂತೆ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ.

ತಪ್ಪು ಮಾಡಿದ ಮೇಲೆ ನಡವಳಿಕೆ ತಿದ್ದಿಕೊಳ್ಳಲಿ ಎಂದು ಕೋರ್ಟ್ ಜೈಲಿಗೆ ಕಳುಹಿಸುತ್ತದೆ. ನಿಮ್ಮ ವರ್ತನೆ ತಿದ್ದಿಕೊಳ್ಳಿ. ಇರುವಷ್ಟು ದಿನ ಜೈಲಿನ ನಿಯಮಗಳನ್ನು ಪಾಲಿಸಿ. ಜೈಲಿನ ಶಿಸ್ತು, ನಿಯಮ ಉಲ್ಲಂಘಿಸುವುದು ಸರಿಯಲ್ಲ. ಪದೇ ಪದೇ ಸೌಲಭ್ಯಗಳಿಗಾಗಿ ಸಿಬ್ಬಂದಿಗಳಿಗೆ ಕಿರಿಕಿರಿ ನೀಡುತ್ತಿದ್ದೀರಿ. ಕಾನೂನು ಪ್ರಕಾರ ಏನು ಸಾಧ್ಯ ಅಷ್ಟು ಮಾತ್ರ ಕೊಡುತ್ತೇವೆ. ಹೆಚ್ಚಿನ ಸೌಲಭ್ಯ ಬೇಕೆಂದರೆ ನ್ಯಾಯಾಲಯಕ್ಕೆ ಅರ್ಜಿ ಹಾಕಿ ಎಂದು ಜೈಲರ್ ಎಚ್ಚರಿಕೆ ನೀಡಿದ್ದಾರೆ ಎಂದು ತಿಳಿದುಬಂದಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular