HomeEntertainmentಇಂದು ಬಿಡುಗಡೆಯಾಗಲಿದೆ ದಳಪತಿ ವಿಜಯ್ ನಟನೆಯ 'ದಿ ಗ್ರೇಟೆಸ್ಟ್ ಆಫ್ ಆಲ್ ಟೈಮ್' ಟ್ರೈಲರ್

ಇಂದು ಬಿಡುಗಡೆಯಾಗಲಿದೆ ದಳಪತಿ ವಿಜಯ್ ನಟನೆಯ ‘ದಿ ಗ್ರೇಟೆಸ್ಟ್ ಆಫ್ ಆಲ್ ಟೈಮ್’ ಟ್ರೈಲರ್

ವೆಂಕಟ್ ಪ್ರಭು ನಿರ್ದೇಶನದ ದಳಪತಿ ವಿಜಯ್ ನಟನೆಯ ‘ದಿ ಗ್ರೇಟೆಸ್ಟ್ ಆಫ್ ಆಲ್ ಟೈಮ್’ ಚಿತ್ರ ಮುಂದಿನ ತಿಂಗಳು ಸೆಪ್ಟೆಂಬರ್ 5ರಂದು ತೆರೆ ಕಾಣಲಿದ್ದು, ವಿಜಯ್ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಇದರ ಟ್ರೈಲರ್ ಇಂದು ಯೂಟ್ಯೂಬಲ್ಲಿ ಬಿಡುಗಡೆಯಾಗಲಿದ್ದು, ಎಲ್ಲಾ ದಾಖಲೆಗಳನ್ನು  ಪುಡಿ ಪುಡಿ ಮಾಡಲು ಸಜ್ಜಾಗಿದೆ.

ಈ ಚಿತ್ರದಲ್ಲಿ ದಳಪತಿ ವಿಜಯ್ ದ್ವಿಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಪ್ರಶಾಂತ್, ಅಜ್ಮಲ್ ಅಮೀರ್, ಜಯರಾಮ್, ಸ್ನೇಹಾ, ಮೀನಾಕ್ಷಿ ಚೌಧರಿ, ವೈಭವ್, ಯೋಗಿ ಬಾಬು, ಯುಗೇಂದ್ರನ್, ವಿಟಿವಿ ಗಣೇಶ್, ಅರವಿಂದ ಆಕಾಶ್, ಅಜಯ್ ರಾಜ್, ಕೋಮಲ್ ಶರ್ಮಾ, ತೆರೆ ಹಂಚಿಕೊಂಡಿದ್ದಾರೆ. ಎಜಿಎಸ್ ಎಂಟರ್ಟೈನ್ಮೆಂಟ್ ಬ್ಯಾನರ್ ನಡಿ ಕಲ್ಪತಿ ಎಸ್. ಅಘೋರಂ, ಕಲ್ಪಾತಿ ಎಸ್.ಗಣೇಶ್, ಕಲ್ಪಾಟಿ ಎಸ್.ಸುರೇಶ್, ಬಂಡವಾಳ ಹೂಡಿದ್ದಾರೆ. ಯುವನ್ ಶಂಕರ್ ರಾಜ ಸಂಗೀತ ಸಂಯೋಜನೆ ನೀಡಿದ್ದು, ವೆಂಕಟ್ ರಾಜನ್ ಸಂಕಲನವಿದೆ.

For Latest News Updates, Join Our Whatsapp Community🚩
RELATED ARTICLES

Most Popular