HomeKarnatakaBIG NEWS: ಮೊದಲು NDAಯಿಂದ ಹೊರ ಬಂದು ಮಾತನಾಡಲಿ; HDKಗೆ ಡಿಸಿಎಂ ಡಿ.ಕೆ. ಶಿವಕುಮಾರ್ ತಿರುಗೇಟು

BIG NEWS: ಮೊದಲು NDAಯಿಂದ ಹೊರ ಬಂದು ಮಾತನಾಡಲಿ; HDKಗೆ ಡಿಸಿಎಂ ಡಿ.ಕೆ. ಶಿವಕುಮಾರ್ ತಿರುಗೇಟು

ಬೆಂಗಳೂರು: ಡಿ.ಕೆ.ಶಿವಕುಮಾರ್ ನಾಳೆಯೇ ಸಿಎಂ ಆಗುವುದಾದರೆ ಜೆಡಿಎಸ್ ನ 19 ಶಾಸಕರು ಬೆಂಬಲ ನೀಡುತ್ತೇವೆ ಎಂಬ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೇಳಿಕೆಗೆ ತಿರುಗೇಟು ನೀಡಿರುವ ಡಿಸಿಎಂ ಡಿ.ಕೆ.ಶಿವಕುಮಾರ್, ಮಾಡೋ ಕಾಲದಲ್ಲಿ ಮಾಡಿಲ್ಲ ಈಗ ಏನು ಮಾಡಲು ಆಗುತ್ತೆ? ಎಂದು ಪ್ರಶ್ನಿಸಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿಸಿಎಂ, ಕುಮಾರಸ್ವಾಮಿ ಹೇಳಿಕೆಗೆ ಬಹಳ ಸಂತೋಷ. ನಮಗೂ ಎನ್.ಡಿ.ಎ ಗೂ ಸಂಬಂಧವಿಲ್ಲ. ಮೊದಲು ಹೆಚ್.ಡಿ.ಕೆ ಎನ್.ಡಿ.ಎಯಿಂದ ಹೊರಬಂದು ಮಾತನಾಡಲಿ ಎಂದು ಟಾಂಗ್ ನೀಡಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ನಾವು 136 ಶಾಸಕರಿದ್ದೇವೆ. ಜನ ಕೊಟ್ಟಿರುವ ಆಶಿರ್ವಾದವಿದೆ ಸಾಕು ನಮಗೆ. ಬೆಂಬಲ ನೀಡಬೇಕಾದ ಕಾಲದಲ್ಲಿ ಏನೂ ಮಾಡಿಲ್ಲ. ಈಗೇನು ಮಾಡಲು ಸಾಧ್ಯ? ಎಂದು ಕೇಳಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular