HomeKarnatakaBIG NEWS: ಕಾಂಗ್ರೆಸ್-ಬಿಜೆಪಿ ಬ್ಲ್ಯಾಕ್ ಮೇಲ್ ಫೈಟ್: ಇದು ನವರಂಗಿ ನಾರಾಯಣನ ಮಾತು...ಅಶ್ವತ್ಥನಾರಾಯಣ್ ಗೆ ಡಿಸಿಎಂ...

BIG NEWS: ಕಾಂಗ್ರೆಸ್-ಬಿಜೆಪಿ ಬ್ಲ್ಯಾಕ್ ಮೇಲ್ ಫೈಟ್: ಇದು ನವರಂಗಿ ನಾರಾಯಣನ ಮಾತು…ಅಶ್ವತ್ಥನಾರಾಯಣ್ ಗೆ ಡಿಸಿಎಂ ತಿರುಗೇಟು

ಬೆಂಗಳೂರು: ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ಬ್ಲ್ಯಾಕ್ ಮೇಲ್ ಫೈಟ್ ಜೋರಾಗಿದ್ದು, ಬಿಜೆಪಿಯ ಕೆಲ ನಾಯಕರನ್ನು ಕಾಂಗ್ರೆಸ್ ನವರು ಬ್ಲ್ಯಾಕ್ ಮೇಲ್ ಮಾಡುತ್ತಿದ್ದಾರೆ ಎಂಬ ಮಾಜಿ ಸಚಿವ ಅಶ್ವತ್ಥನಾರಾಯಣ ಹೇಳಿಗೆ ಡಿಸಿಎಂ ಡಿ.ಕೆ.ಶಿವಕುಮಾರ್ ತಿರುಗೇಟು ನೀಡಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿಸಿಎಂ ಡಿ.ಕೆ.ಶಿವಕುಮಾರ್, ಕಾಂಗ್ರೆಸ್ ನಿಂದ ಬ್ಲ್ಯಾಕ್ ಮೇಲ್ ಅಂತಾ ಹೇಳಿದ್ದಾರಾ…? ಇದು ನವರಂಗಿ ನಾರಾಯಣನ ಮಾತು…ಎಂದು ವ್ಯಂಗ್ಯವಾಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಅಶ್ವತ್ಥನಾರಾಯಣ್ ಅವರ ಆರೋಪಕ್ಕೆ ನಮ್ಮ ಸಚಿವ ಎಂ.ಬಿ.ಪಾಟೀಲ್ ಸರಿಯಾಗಿಯೇ ಉತ್ತರ ನೀಡಿದ್ದಾರೆ ಎಂದು ತಿಳಿಸಿದ್ದಾರೆ.

ಶಾಸಕ ಬಿ.ಸಿ.ಪಾಟೀಲ್, ರಾಜು ಗೌಡ ನಟ ಕಿಚ್ಚ ಸುದೀಪ್ ಹುಟ್ಟುಹಬ್ಬದ ಪಾರ್ಟಿಯಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಭೇಟಿ ವಿಚಾರವಾಗಿ ಪ್ರತಿಕ್ರಿಯಿಸಿದ್ದ ಬಿಜೆಪಿ ಶಾಸಕ ಅಶ್ವತ್ಥನಾರಾಯಣ, ಕೆಲ ಬಿಜೆಪಿ ನಾಯಕರನ್ನು ಕಾಂಗ್ರೆಸ್ ನವರು ಬ್ಲ್ಯಾಕ್ ಮೇಲ್ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದರು. ಅಶ್ವತ್ಥನಾರಾಯಣ ಹೇಳಿಕೆಗೆ ಕಿಡಿಕಾರಿದ್ದ ಅಸಚಿವ ಎಂ.ಬಿ.ಪಾಟೀಲ್, ಬ್ಲ್ಯಾಕ್ ಮೇಲ್ ಮಾಡುವಂತಹ ಕೆಲಸ ಅವರು ಮಾಡಿದ್ದಾರೆ ಅಂತ ಆಯ್ತು. ಬ್ಲ್ಯಾಕ್ ಮೇಲ್ ಮಾಡುವ ಕೆಲಸ ಏನು ಮಾಡಿದ್ದಾರೆ ಎಂಬುದನ್ನು ಅವರೇ ಸ್ಪಷ್ಟಪಡಿಸಬೇಕು ಎಂದು ಟಾಂಗ್ ನೀಡಿದ್ದರು.

For Latest News Updates, Join Our Whatsapp Community🚩
RELATED ARTICLES

Most Popular