ಬೆಂಗಳೂರು: ಖಾತೆ ಹಂಚಿಕೆ ವಿಳಂಬ ವಿಚಾರವಾಗಿ ವಿಅಪ್ಕ್ಷ ಬಿಜೆಪಿ ನಾಯಕರು ಸರ್ಕಾರದ ವಿರುದ್ಧ ನಡೆಸುತ್ತಿದ್ದ ವಾಗ್ದಾಳಿ ವಿಚಾರವಾಗಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ. ಖಾತೆ ಹಂಚಿಕೆ ಮಾಡಲು ಇನ್ನೂ ಸಮಯವಿದೆ. ಶೀಘ್ರದಲ್ಲಿ ಆಗಲಿದೆ ಎಂದು ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ಸಿಎಂ ಡಿ.ಕೆ.ಶಿವಕುಮಾರ್, ಯಡಿಯೂರಪ್ಪ ಅವರು ಎಷ್ಟು ದಿನ ಒಬ್ಬರೇ ಸಿಎಂ ಆಗಿರಲಿಲ್ಲ? ಎಷ್ಟು ದಿನ ದೆಹಲಿಯಲ್ಲೇ ಉಳಿದುಕೊಂಡಿರಲಿಲ್ಲ? ಖಾತೆ ಹಂಚಿಕೆ ಶೀಘ್ರದಲ್ಲೇ ಆಗಲಿದೆ ಎಂದು ಹೇಳುವ ಮೂಲಕ ವಿಪಕ್ಷ ನಾಯಕರಿಗೆ ಟಾಂಗ್ ನೀಡಿದ್ದಾರೆ.
ಸದನದಲ್ಲಿ ಹೊಸ ಸಚಿವರ ತಯಾರಿಗೆ ಅಡ್ಡಿಯಾಗಲಿದೆ ಎಂಬ ವಿಪಕ್ಷಗಳ ಆರೋಪಕ್ಕೆ, ಖಾತೆ ಹಂಚಿಕೆಗೆ ಇನ್ನೂ ಸಮಯವಿದೆ. ಜುಲೈ 15ರವರೆಗೆ ಕಾಲಾವಕಾಶವಿದೆ. 13ರಂದು ಸಂತಾಪ ಸೂಚನೆ ಹಾಗೂ 14ರಂದು ನೂತನ ಸಚಿವರ ಪರಿಚಯ ಕಾರ್ಯಕ್ರಮ ಇರಲಿದೆ ಎಂದರು.
ಇನ್ನು ಸಚಿವ ನಾಗೇಂದ್ರ ರಾಜೀನಾಮೆಗೆ ಒತ್ತಾಯಿಸಿ ಬಿಜೆಪಿ ಪ್ರತಿಭಟನೆ ನಡೆಸುವುದಾಗಿ ಹೇಳಿರುವ ಕುರಿತು ಪ್ರತಿಕ್ರಿಯಿಸಿ, ಅವರು ಹೋರಾಟ ಮಾಡಿಕೊಳ್ಳಲಿ ಎಂದರು.
ಸಚಿವ ಸ್ಥಾನ ಸಿಗದೆ ಅಸಮಾಧಾನಗೊಂಡಿರುವ ಹಿರಿಯ ಶಾಸಕ ಎಂ. ಕೃಷ್ಣಪ್ಪ ಅವರು ಸಚಿವ ಸ್ಥಾನ ಕೇಳುತ್ತಿದ್ದಾರೆ, ಕೇಳುವುದರಲ್ಲಿ ತಪ್ಪೇನೂ ಇಲ್ಲ. ಯಾರೂ ಬೇಜಾರಾಗಿಲ್ಲ, ಹಿರಿಯರಿದ್ದಾರೆ. ಅವರಿಗೆ ಬೇರೆ ಜವಾಬ್ದಾರಿಗಳನ್ನು ನೀಡಬೇಕಾಗುತ್ತದೆ. ಮಹಿಳಾ ಸಚಿವರ ಸೇರ್ಪಡೆ ಬಗ್ಗೆ ನಿರ್ಧಾರ ಕೈಗೊಳ್ಳುವಾಗ ಮಾಧ್ಯಮಗಳಿಗೆ ತಿಳಿಸಿಯೇ ಮಾಡುತ್ತೇವೆ. ಸಂಪುಟದಲ್ಲಿ ಕೆಲ ಸಣ್ಣ ಬದಲಾವಣೆಗಳಾಗಲಿವೆ ಎಂದು ತಿಳಿಸಿದರು.

