ಬೆಂಗಳೂರು: ವಿದ್ಯುತ್ ವ್ಯತ್ಯಯದಿಂದಾಗಿ ಡಿಸಿಎಂ ಡಿ.ಕೆ.ಶಿವಕುಮಾರ್ ಲಿಫ್ಟ್ ಒಳಗಡೆ ಸಿಲುಕಿಕೊಂಡ ಘಟನೆ ಬಿ.ಎಂ.ಆರ್.ಸಿ.ಎಲ್ ಮುಖ್ಯ ಕಚೇರಿಯಲ್ಲಿ ನಡೆದಿದೆ.
ಪ್ರಗತಿ ಪರಿಶೀಲನಾ ಸಭೆಗಾಗಿ ಬಿ.ಎಂ.ಆರ್.ಸಿ.ಎಲ್ ಕಚೇರಿಗೆ ಡಿಸಿಎಂ ಡಿ.ಕೆ.ಶಿವಕುಮಾರ್ ಆಗಮಿಸಿದ ವೇಳೆ ಲಿಫ್ಟ್ ಹತ್ತಿ ಕಚೇರಿಗೆ ತೆರಳುತ್ತಿದ್ದ ವೇಳೆ ಏಕಾಏಕಿ ಪವರ್ ಕಟ್ ಆಗಿದ್ದು, ಡಿಸಿಎಂ ಡಿ.ಕೆ.ಶಿವಕುಮಾರ್ ಲಿಫ್ಟ್ ನಲ್ಲಿ ಸಿಲುಕಿದ್ದಾರೆ.
20 ಸೆಕೆಂಡ್ ಗಳ ಕಾಲ ಡಿಸಿಎಂ ಲಿಫ್ಟ್ ನಲ್ಲಿಯೇ ಸಿಲುಕಿದ್ದು, ತಕ್ಷಣ ಭದ್ರತಾ ಸಿಬ್ಬಂದಿ ಲಿಫ್ಟ್ ಬಾಗಿಲು ತೆರೆದಿದ್ದಾರೆ. ಲಿಫ್ಟ್ ಬಾಗಿಲು ತೆರೆಯುತ್ತಿದ್ದಂತೆಯೇ ಡಿಸಿಎಂ ಡಿ.ಕೆ.ಶಿವಕುಮಾರ್ ಲಿಫ್ಟ್ ನಿಂದ ಹೊರಬಂದು ನೇರವಾಗಿ ಸಭೆಗೆ ತೆರಳಿದರು.

