ಬೆಂಗಳೂರು: ಮನ್ ರೇಗಾ ಯೋಜನೆ ವಿಚಾರವಾಗಿ ಓಪನ್ ಡಿಬೆಟ್ ಮಾಡಬೇಕು. ಚರ್ಚೆಗೆ ಬರಲಿ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ನೀಡಿರುವ ಆಹ್ವಾನವನ್ನು ಡಿಸಿಎಂ ಡಿ.ಕೆ.ಶಿವಕುಮಾರ್ ಸ್ವೀಕರಿಸಿದ್ದು, ಡಿಬೇಟ್ ಗೆ ಡೇಟ್ ಮತ್ತು ಟೈಂ ಫಿಕ್ಸ್ ಮಾಡಿ ಹೇಳಿ ಎಂದು ಸವಾಲು ಹಾಕಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಡಿಸಿಎಂ ಡಿ.ಕೆ.ಶಿವಕುಮಾರ್, ಕುಮಾರಸ್ವಾಮಿ ನೀಡಿರುವ ಪಂಥಾಹ್ವಾನ ಸ್ವೀಕರಿಸಿದ್ದೇನೆ. ಮನ್ ರೇಗಾ ಕುರಿತ ಚರ್ಚೆಗೆ ನಾನು ಸಿದ್ಧ. ಅವರು ಯಾವತ್ತು ಹೇಳ್ತಾರೋ ಅವತ್ತು ಸಾರ್ವಜನಿಕವಾಗಿ ಚರ್ಚೆಗೆ ಬರಲಿ. ಇಲ್ಲದಿದ್ದರೆ ವಿಧಾನಸಭೆಗೆ ಬರಲಿ ಎಂದು ಹೇಳಿದರು.
ಡಿಬೇಟ್ ಯಾವಾಗ ಟೈಂ ಫಿಕ್ಸ್ ಮಾಡಿ ಹೇಳಿ ಚರ್ಚೆಗೆ ರೆಡಿ ಇದ್ದೇನೆ. ನನಗೆ ಯಾವ ಪ್ರಿಪರೇಷನ್ ಬೇಕಿಲ್ಲ. ಇಂದು ಸಂಜೆಯಿಂದಲೇ ಚರ್ಚೆಗೆ ಸಿದ್ಧ ಎಂದರು. ಯಾವ ಮಾಧ್ಯಮದಲ್ಲಾದರೂ ಚೆರ್ಚೆಗೆ ರೆಡಿ. ಚರ್ಚೆಗೆ ಕುಮಾರಸ್ವಾಮಿಯವರೇ ಬರಲಿ. ಅವರನ್ನು ಸ್ವಾಗತ ಮಾಡುತ್ತೇನೆ. ಮೊದಲು ಅವರೇ ಬಂದ್ರೆ ಚನ್ನಾಗಿರುತ್ತೆ. ಸಣ್ಣಪುಟ್ಟ ನಾಯಕರು ಚರ್ಚೆಗೆ ಬಂದರೆ ನಾನು ಬರಲ್ಲ. ಅವರ ಪಾರ್ಟಿ ಅಧ್ಯಕ್ಷರೇ ಬರಬೇಕು. ಕುಮಾರಸ್ವಾಮಿಯವರೇ ಬರಲಿ ಎಂದು ಹೇಳಿದರು.
ನಾವು ನರೇಗಾ ವಿಚಾರವಾಗಿ ದೊಡ್ಡ ಹೋರಾಟ ಮಾಡುತ್ತೇವೆ. ಹೆಚ್.ಡಿ.ಕೆ ಯಾವಾಗ ಹೇಳ್ತಾರೋ ಆವಾಗ ಚರ್ಚೆಗೆ ಬರಲು ಸಿದ್ಧನಿದ್ದೇನೆ ಎಂದು ತಿಳಿಸಿದ್ದಾರೆ.

