HomeKarnatakaBIG NEWS: ಯಾವ ಬಾಂಬ್ ಬೇಕಾದ್ರೂ ಹಾಕಲಿ; ಯಾವುದಕ್ಕೂ ಬಗ್ಗಲ್ಲ; HDKಗೆ ಡಿಸಿಎಂ ಖಡಕ್ ತಿರುಗೇಟು

BIG NEWS: ಯಾವ ಬಾಂಬ್ ಬೇಕಾದ್ರೂ ಹಾಕಲಿ; ಯಾವುದಕ್ಕೂ ಬಗ್ಗಲ್ಲ; HDKಗೆ ಡಿಸಿಎಂ ಖಡಕ್ ತಿರುಗೇಟು

ಕಲಬುರ್ಗಿ: ರಾಜ್ಯ ಸರ್ಕಾರದ ವಿರುದ್ಧ ವರ್ಗಾವಣೆ ದಂಧೆ ಆರೋಪ ಮಾಡುತ್ತಿರುವ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ವಿರುದ್ಧ ಡಿಸಿಎಂ ಡಿ.ಕೆ.ಶಿವಕುಮಾರ್ ಕಿಡಿ ಕಾರಿದ್ದು, ಅವರು ಯಾವ ಬಾಂಬ್ ಬೇಕಾದರೂ ಹಾಕಲಿ, ಯಾವುದಕ್ಕೂ ಹೆದರುವುದಿಲ್ಲ ಎಂದು ಹೇಳಿದ್ದಾರೆ.

ಕಲಬುರ್ಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ.ಶಿವಕುಮಾರ್, ಕುಮಾರಸ್ವಾಮಿ ಯಾವುದೇ ಬಾಂಬ್ ಹಾಕಿದರೂ ನಾನು ಬಗ್ಗುವುದೂ ಇಲ್ಲ, ಜಗ್ಗುವುದೂ ಇಲ್ಲ. ಯಾರನ್ನೋ ಹೆದರಿಸಿದಂತೆ ಅವರು ನನ್ನನ್ನು ಹೆದರಿಸಲು ಆಗಲ್ಲ. 1975ರಿಂದ ಇಂತಹ ಬಾಂಬ್ ಗಳನ್ನು ಸಾಕಷ್ಟು ನೋಡಿದ್ದೇನೆ ಎಂದು ತಿರುಗೇಟು ನೀಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ವರ್ಗಾವಣೆ ದಂಧೆಗೆ ಸಂಬಂಧಿಸಿದ್ದೇ ಆಗಲಿ ಅಥವಾ ಇನ್ಯಾವುದಕ್ಕೇ ಸಂಬಂಧಿಸಿದ್ದೇ ಆಗಲಿ, ದಾಖಲೆಗಳಿದ್ದರೆ ಕುಮಾರಸ್ವಾಮಿಯವರು ಲೋಕಾಯುಕ್ತಕ್ಕೆ ನೀಡಲಿ ಎಂದು ಟಾಂಗ್ ನೀಡಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular