HomeLatest Newsಜನಾರ್ಧನ ರೆಡ್ಡಿ ಅಮೇರಿಕಾದಿಂದ ಸೆಕ್ಯೂರಿಟಿ ತರಿಸಿಕೊಳ್ಳಲಿ: ಡಿಸಿಎಂ ಡಿ.ಕೆ.ಶಿವಕುಮಾರ್ ವ್ಯಂಗ್ಯ

ಜನಾರ್ಧನ ರೆಡ್ಡಿ ಅಮೇರಿಕಾದಿಂದ ಸೆಕ್ಯೂರಿಟಿ ತರಿಸಿಕೊಳ್ಳಲಿ: ಡಿಸಿಎಂ ಡಿ.ಕೆ.ಶಿವಕುಮಾರ್ ವ್ಯಂಗ್ಯ

ಬೆಂಗಳೂರು: ಬಳ್ಳಾರಿ ಗಲಾಟೆ-ಫೈರಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ರಚಿಸಿದ್ದ ಎಚ್.ಎಂ.ರೇವಣ್ಣ ನೇಯೃತ್ವದ ಸಮಿತಿ ಒಳ್ಳೆಯ ಮಾಹಿತಿಗಳನ್ನು ಪಡೆದುಕೊಂಡು ಬಂದಿದೆ. ಅಧಿಕೃತ ಹಾಗೂ ಅನಧಿಕೃತ ವಿಚಾರಗಳನ್ನು ಭೇಟಿ ಮಾಡಿ ತಿಳಿಸಿದ್ದಾರೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿಸಿಎಂ ಡಿ.ಕೆ.ಶಿವಕುಮಾರ್, ಈ ವಿಚಾರ ತಿಳಿಸಿದರು. ವಾಲ್ಮೀಕಿ ಮಹರ್ಷಿ ಎಲ್ಲಾ ಸಮುದಾಯಕ್ಕೆ ಸೇರಿದವರು. ಎಲ್ಲಾ ಕಡೆಯೂ ಪ್ರತಿಮೆಗಳನ್ನು ಇಡುತ್ತಾರೆ. ಇದಕ್ಕೆ ಅಸೂಯೆ ಏಕೆ ಪಡಬೇಕು. ವಾಲ್ಮೀಕಿ ಮಹರ್ಷಿಯವರು ಒಂದು ಸಮುದಾಯಕ್ಕೆ ಸೇರಿದವರೇ? ಅವರು ಎಲ್ಲಾ ಸಮುದಾಯದ ಆಸ್ತಿ. ಅವರು ಬರೆದಿರುವ ರಾಮಯಣವನ್ನು ಎಲ್ಲರೂ ಓದುವುದಿಲ್ಲವೇ?. ಹೀಗಿರುವಾಗ ಅವರ ಬ್ಯಾನರ್ ಹಾಕಲು ಜನಾರ್ಧನ ರೆಡ್ಡಿ ಆಕ್ಷೇಪ ವ್ಯಕ್ತಪಡಿಸಿದ್ದು ಸರಿಯಲ್ಲ ಎಂದರು.

ಜನಾರ್ಧನ ರೆಡ್ಡಿ ಝಡ್ ಶ್ರೇಣಿ ಭದ್ರತೆ ನೀಡುವಂತೆ ಪತ್ರ ಬರೆದಿರುವ ವಿಚಾರವಾಗಿ ಪ್ರತಿಕ್ರಿಯಿಸಿದ ಡಿಸಿಎಂ, ಝಡ್ ಆದರೂ ಕೇಳಲಿ. ಇರಾನ್, ಅಮೆರಿಕಾದಿಂದಾದರೂ ಸೆಕ್ಯುರಿಟಿ ತರಿಸಿಕೊಳ್ಳಲಿ.‌ ಇವರು ಯಾರನ್ನಾದರೂ ನೇಮಿಸಿಕೊಳ್ಳಲಿ. ಬೇಡ ಎಂದವರು ಯಾರು? ಎಂದು ವ್ಯಂಗ್ಯವಾಡಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ರೆಡ್ಡಿ ಅವರಿಗೆ ರಕ್ಷಣೆ ನೀಡಬೇಕು ಎಂದು ಕೇಂದ್ರ ಸಚಿವ ವಿ. ಸೋಮಣ್ಣ ಅವರು ಸಹ ಹೇಳಿದ್ದಾರೆ. ಅವರ ಪಕ್ಷದ ಕೇಡರ್ಸ್ ನೂರು ಮಂದಿಯನ್ನು ಅವರು ತಯಾರಿ ಮಾಡಿಕೊಳ್ಳಲಿ ಎಂದರು.

ಬಳ್ಳಾರಿ ಗಲಾಟೆ ಬಗ್ಗೆ ಸಿಐಡಿ ಅಥವಾ ಎಸ್ ಐಟಿ ರಚನೆ ವಿಚಾರ ಮುಖ್ಯಮಂತ್ರಿಯವರು ಹಾಗೂ ಗೃಹ ಸಚಿವರು ತೀರ್ಮಾನ ಮಾಡುತ್ತಾರೆ. ಈ ಬಗ್ಗೆ ಯಾವ ಚರ್ಚೆಯೂ ನನಗೆ ಗೊತ್ತಿಲ್ಲ ಎಂದರು.

ಗನ್ ಫೈರ್ ವೇಳೆ ಕಾಂಗ್ರೆಸ್ ಕಾರ್ಯಕರ್ತನಿಗೆ ಗುಂಡೆಟು ತಗುಲಿ ಸಾವು ವಿಚಾರವಾಗಿ, ಗುಂಡು ಯಾರದ್ದೇ ಆಗಿದ್ದರೂ ಅವರ ವಿರುದ್ಧ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದರು.

For Latest News Updates, Join Our Whatsapp Community🚩
RELATED ARTICLES

Most Popular