HomeKarnatakaಕಾಲೇಜು ದಿನಗಳಲ್ಲಿ ಓಡಿಸುತ್ತಿದ್ದ ಬೈಕ್ ಗೆ ಹೊಸ ರೂಪ: ಫುಲ್ ಖುಷ್ ಆಗಿ ನೆನಪಿನ ಬುತ್ತಿ...

ಕಾಲೇಜು ದಿನಗಳಲ್ಲಿ ಓಡಿಸುತ್ತಿದ್ದ ಬೈಕ್ ಗೆ ಹೊಸ ರೂಪ: ಫುಲ್ ಖುಷ್ ಆಗಿ ನೆನಪಿನ ಬುತ್ತಿ ಬಿಚ್ಚಿಟ್ಟ ಡಿಸಿಎಂ

ಬೆಂಗಳೂರು: ಡಿಸಿಎಂ ಡಿ.ಕೆ.ಶಿವಕುಮಾರ್ ತಮ್ಮ ಹಳೇ ಬೈಕ್ ಗೆ ಹೊಸ ರೂಪ ಕೊಡಿಸಿ ಕಾಲೇಜು ದಿನಗಳಲ್ಲಿನ ನೆನಪನ್ನು ಹಂಚಿಕೊಂಡಿದ್ದಾರೆ.

ಆ ಕಾಲದಲ್ಲಿ ರೋಡ್ ಕಿಂಗ್ ಎಂದೇ ಜನಪ್ರಿಯವಾಗಿದ್ದ Yezdi ಬೈಕ್ ನ್ನು ಡಿಸಿಎಂ ಡಿ.ಕೆ.ಶಿವಕುಮಾರ್ ಹಾಗೆಯೇ ಇಟ್ಟುಕೊಂಡಿದ್ದು, ಮನೆ ಪಡಸಾಲೆಯಲ್ಲಿ ತುಕ್ಕು ಹಿಡಿದು ನಿಂತಿದ್ದ ಬೈಕ್ ಗೆ ಹೊಸ ರೂಪ ನೀಡಿ ಮತ್ತೆ ಹೊಸ ಬೈಕನ್ನಾಗಿ ಮಾಡಿಸಿದ್ದಾರೆ.

ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸಂತಸ ಹಂಚಿಕೊಂಡಿರುವ ಡಿಸಿಎಂ ಡಿ.ಕೆ.ಶಿವಕುಮಾರ್, ಕಾಲೇಜ್ ಡೇಸ್ ನಲ್ಲಿ ಬೈಕ್ ಕ್ರೇಜ್ ಸಾಮಾನ್ಯ, ನನ್ನ ಕಾಲೇಜು ದಿನಗಳಲ್ಲಿ ಓಡಿಸಿದ ಬೈಕ್ ಕೆಲ ವರ್ಷಗಳಿಂದ ಧೂಳು ಹಿಡಿದಿತ್ತು. ವಿಂಟೇಜ್ ಬೈಕ್ ಪ್ರೇಮಿಯಾದ ಸುಪ್ರಿತ್ ಎನ್ನುವ ಯುವಕ ಸಂಪೂರ್ಣವಾಗಿ ಮರು ನವೀಕರಣ ಮಾಡಿ ಇಂದು ನನಗೆ ಹಸ್ತಾಂತರಿಸಿದರು. ನನ್ನ ಮೊದಲ ಬೈಕ್ ಇದು, ಇದರೊಂದಿಗೆ ಸಾವಿರಾರು ನೆನಪುಗಳು ಬೆಸೆದುಕೊಂಡಿವೆ. ಆ ನೆನಪಿನ ಪುಟಗಳಿಗೆ ಹೋಗಿ ಬಂದ ಅನುಭವವಾಯಿತು ಎಂದು ಬರೆದುಕೊಂಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular