HomeKarnatakaಅಡುಗೆ ಸಿಲಿಂಡರ್ ದರ ದಾಖಲೆ ಏರಿಕೆ: ಪ್ರಧಾನಿ ಮೋದಿ 8 PMಗೆ ಮತ್ತೊಮ್ಮೆ ಟಿವಿಯಲ್ಲಿ ಕುಳಿತು...

ಅಡುಗೆ ಸಿಲಿಂಡರ್ ದರ ದಾಖಲೆ ಏರಿಕೆ: ಪ್ರಧಾನಿ ಮೋದಿ 8 PMಗೆ ಮತ್ತೊಮ್ಮೆ ಟಿವಿಯಲ್ಲಿ ಕುಳಿತು ಜನರಿಗೆ ’ಕಡಿಮೆ ಊಟ ಮಾಡಿ’ ಎಂಬ ಆತ್ಮನಿರ್ಬರತೆಯ ಉಚಿತ ಸಲಹೆ ನೀಡಬಹುದೇನೋ: ಪ್ರಿಯಾಂಕ್ ಖರ್ಗೆ ಕಿಡಿ

ಬೆಂಗಳೂರು: ಅಡುಗೆ ಸಿಲಿಂಡರ್ ದರ ಭಾರಿ ಏರಿಕೆಯಾಗಿದ್ದು, ಕೇಂದ್ರ ಸರ್ಕಾರದ ವಿರುದ್ಧ ವಿಪಕ್ಷಗಳು ಟೀಕಾಪ್ರಹಾರ ನಡೆಸಿವೆ. ಈ ಹಿಂದೆ ಇಂಧನ ಬಳಕೆ ಮಿತವ್ಯಯದ ಬಗ್ಗೆ ಹಾಗೂ ಅಡ್ಗೆ ಎಣ್ಣೆ ಬಳಕೆ ಕಡಿಮೆ ಮಾಡುವಂತೆ ಸೂಚಿಸಿದ್ದ ಪ್ರಧಾನಿ ನರೇಂದ್ರ ಮೋದಿ ಈಗ ಊಟ ಕಡಿಮೆ ಮಾಡುವಂತೆ ಹೇಳಬಹುದು ಎಂದು ವಾಗ್ದಾಳಿ ನಡೆಸಿವೆ.

ಸಿಲಿಂಡರ್ ದರ ದಾಖಲೆ ಮಟ್ಟದಲ್ಲಿ ಏರಿಕೆಯಾಗಿರುವುದರಿಂದ ಈಗ ಪ್ರಧಾನಿ ಮೋದಿಯವರು ರಾತ್ರಿ ಎಂಟುಗಂಟೆಗೆ ಟಿವಿಯಲ್ಲಿ ಬಂದು ಊಟ ಕಡಿಮೆ ಮಾಡಲು ಸಲಹೆ ನೀಡಬಹುದು ಎಂದು ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ ನಡೆಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈ ಬಗ್ಗೆ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿರುವ ಪ್ರಿಯಾಂಕ್ ಖರ್ಗೆ, ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆ ದಾಖಲೆ ಮಟ್ಟದಲ್ಲಿ ಏರಿಕೆಯಾದ ಬೆನ್ನಲ್ಲೇ ಗೃಹಬಳಕೆಯ ಸಿಲಿಂಡರ್ ಬೆಲೆ 3 ತಿಂಗಳ ಅವಧಿಯಲ್ಲಿ ಎರಡನೇ ಬಾರಿ ₹29ರಷ್ಟು ಏರಿಕೆಯಾಗಿದೆ.

ಬಹುಶಃ 8PM ಪ್ರಧಾನಿಗಳು ಮತ್ತೊಮ್ಮೆ ಟಿವಿಯಲ್ಲಿ ಕುಳಿತು ದೇಶದ ಜನತೆಗೆ “ಕಡಿಮೆ ಊಟ ಮಾಡಿ” ಎಂಬ ಆತ್ಮನಿರ್ಬರತೆಯ ಉಚಿತ ಸಲಹೆ ನೀಡಬಹುದೇನೋ! ಎಂದು ಟೀಕಿಸಿದ್ದಾರೆ.

ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನಿಮ್ಮ ಮಾಂಗಲ್ಯ ಕಸಿಯುತ್ತದೆ ಎಂಬ ಅತ್ಯಂತ ಕನಿಷ್ಠ ಮಟ್ಟದ ಹೇಳಿಕೆ ನೀಡಿದ್ದ ಪ್ರಧಾನಿಗಳು ಈಗ ಜನರ ಅನ್ನದ ತಟ್ಟೆಯನ್ನು ಕಸಿಯುತ್ತಿದ್ದಾರೆ. ಈ ಬೆಲೆ ಏರಿಕೆಯ ಅಚ್ಚೆ ದಿನಗಳ ಬಗ್ಗೆ ಕರ್ನಾಟಕ ಬಿಜೆಪಿ ನಾಯಕರ ಗಾಢಮೌನವು ಜನಸಾಮಾನ್ಯರೆಡೆಗೆ ಅವರಿಗಿರುವ ಮಾನಸಿಕ ಕ್ರೌರ್ಯವನ್ನು ತೋರಿಸುತ್ತದೆ ಎಂದು ಕಿಡಿಕಾರಿದ್ದಾರೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular