ಬೆಂಗಳೂರು: ಬೆಂಗಳೂರಿನ ಅಕ್ಷಯನಗರದಲ್ಲಿ ಸಿಲಿಂಡರ್ ಸ್ಫೋಟಗೊಂಡು ಗೋಡೌನ್ ಹೊತ್ತಿ ಉರುದ ಘಟನೆ ನಡೆದಿದೆ.
ಗುಜರಿ ವಸ್ತುಗಳ ಗೋಡೌನ್ ನಲ್ಲಿದ್ದ ಪೇಪರ್ ಹಾಗೂ ಕಾರ್ಟನ್ ಬಾಕ್ಸ್ ಗಳಿಗೆ ಬೆಂಕಿ ಹೊತ್ತಿಕೊಂಡಿದ್ದು, ಸತತ ಮೂರು ಗಂಟೆಗಳ ಕಾಲ ಧಗ ಧಗನೆ ಬೆಂಕಿ ಹೊತ್ತಿ ಉರಿದಿದೆ. ಸುತ್ತಮುತ್ತಲು ದಟ್ಟ ಹೊಗೆ ಆವರಿಸಿದ್ದು ಕೆಲ ಕಾಲ ಆತಂಕದ ವಾತಾವರಣ ನಿರ್ಮಾಣವಾಯಿತು.
ಘಟನಾ ಸ್ಥಳಕ್ಕೆ ಆರು ಅಗ್ನಿಶಾಮಕ ದಳ ದೌಡಾಯಿಸಿ ಬೆಂಕಿ ನಂದಿಸಿದ್ದಾರೆ. ಸದ್ಯ ಬೆಂಕಿ ತಹಬದಿಗೆ ಬಂದಿದೆ. ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.