HomeIndiaಬಂಗಾಳ ಕೊಲ್ಲಿಯಲ್ಲಿ 'ಮಿಚಾಂಗ್' ಚಂಡಮಾರುತ ಸೃಷ್ಟಿ: ವಾಯುಭಾರ ಕುಸಿತ ಪರಿಣಾಮ ಡಿ.5 ರವರೆಗೆ ಭಾರಿ ಮಳೆ...

ಬಂಗಾಳ ಕೊಲ್ಲಿಯಲ್ಲಿ ‘ಮಿಚಾಂಗ್’ ಚಂಡಮಾರುತ ಸೃಷ್ಟಿ: ವಾಯುಭಾರ ಕುಸಿತ ಪರಿಣಾಮ ಡಿ.5 ರವರೆಗೆ ಭಾರಿ ಮಳೆ ಮುನ್ಸೂಚನೆ

ಚೆನ್ನೈ: ಬಂಗಾಳ ಕೊಲ್ಲಿಯಲ್ಲಿ ಮಿಚಾಂಗ್ ಚಂಡಮಾರುತ ಸೃಷ್ಟಿಯಾಗಿದ್ದು, ವಾಯುಭಾರ ಕುಸಿತ ಪರಿಣಾಮ ಡಿಸೆಂಬರ್ 5 ರವರೆಗೆ ಮಳೆಯಾಗುವ ಸಂಭವ ಇದೆ.

ಬಂಗಾಳಕೊಲ್ಲಿಯ ಆಗ್ನೇಯ ಭಾಗದಲ್ಲಿ ಸೃಷ್ಟಿಯಾಗಿರುವ ಚಂಡಮಾರುತ ನೈರುತ್ಯ ಭಾಗದಲ್ಲಿ ಕೇಂದ್ರೀಕೃತಗೊಂಡಿದೆ. ಪುದುಚೇರಿಯಿಂದ 730 ಕಿ.ಮೀ., ಚೆನ್ನೈನಿಂದ 740 ಕಿ.ಮೀ., ನೆಲ್ಲೂರುನಿಂದ 860 ಕಿ.ಮೀ. ದೂರದಲ್ಲಿ ಚಂಡಮಾರುತ ಚಲನೆಯಲ್ಲಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಡಿಸೆಂಬರ್ 4ರಂದು ಸಂಜೆ ವೇಳೆಗೆ ಚೆನ್ನೈ ಕರಾವಳಿಗೆ ಚಂಡಮಾರುತ ಅಪ್ಪಳಿಸಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಭಾನುವಾರದ ವೇಳೆಗೆ ಚಂಡಮಾರುತ ತೀವ್ರ ಸ್ವರೂಪ ಪಡೆಯಲಿದ್ದು, ಆಂಧ್ರಪ್ರದೇಶಕ್ಕೆ ಹೊಂದಿಕೊಂಡ ತಮಿಳುನಾಡು ಕರಾವಳಿ ಕಡೆಗೆ ಸಾಗಲಿದೆ. ಡಿಸೆಂಬರ್ 4ರಂದು ಚೆನ್ನೈ ಕರಾವಳಿ ಭಾಗಕ್ಕೆ ಅಪ್ಪಳಿಸಲಿದೆ. ನಂತರ ಆಂಧ್ರಪ್ರದೇಶದತ್ತ ಸಾಗಲಿರುವ ಚಂಡಮಾರುತ ನೆಲ್ಲೂರು, ಮಚಲೀಪಟ್ಟಣ ಹಾದು ಹೋಗಲಿದೆ. ಚಂಡಮಾರುತ ವೇಗ ಗಂಟೆಗೆ 100 ಕಿ.ಮೀ. ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಚಂಡಮಾರುತದ ಪ್ರಭಾವದಿಂದ ತಮಿಳುನಾಡು, ಆಂಧ್ರಪ್ರದೇಶದ ಕೆಲವು ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಕಾರಣ ರೆಡ್ ಅಲರ್ಟ್ ನೀಡಲಾಗಿದೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular