ಹವಾಮಾನ ವರದಿಗಾರಿಕೆಯನ್ನು ಬಹಳ ಗಂಭೀರವಾಗಿ ಪರಿಗಣಿಸಿದ ಪಾಕಿಸ್ತಾನದ ವರದಿಗಾರರೊಬ್ಬರು ಸಮುದ್ರದ ಆಳ ಎಷ್ಟಿದೆ ಎಂದು ತೋರಿಸಲು ಖುದ್ದು ನೀರಿಗೆ ಡೈವ್ ಮಾಡಿದ ವಿಡಿಯೋವೊಂದು ವೈರಲ್ ಆಗಿದೆ.
ಕರಾಚಿಯಲ್ಲಿ ಹವಾಮಾನ ವರದಿಗಾರಿಕೆ ಮಾಡುತ್ತಿದ್ದ ಈ ವರದಿಗಾರ ತಮ್ಮ ಮೈಕ್‌ನೊಂದಿಗೆ ನೀರಿಗೆ ಬಿದ್ದು ನೀರಿನ ಆಳ ಎಷ್ಟೆಂದು ಅಲ್ಲಿಂದಲೇ ವಿವರಿಸಿದ್ದಾರೆ. ಅಬ್ದುಲ್ ರೆಹಮಾನ್ ಖಾನ್ ಎಂದು ತನ್ನನ್ನು ಪರಿಚಯಿಸಿಕೊಳ್ಳುವ ಈತ ನಿಜಕ್ಕೂ ಒಬ್ಬ ವರದಿಗಾರನೋ ಇಲ್ಲವೋ ಎಂಬುದು ಖಾತ್ರಿಯಾಗಿಲ್ಲ.
2008ರಲ್ಲಿ ಅಪ್ಲೋಡ್ ಮಾಡಲಾದ ವಿಡಿಯೋವೊಂದು ಭಾರೀ ವೈರಲ್ ಆಗಿ ಖ್ಯಾತಿ ಪಡೆದಿದ್ದ ಚಾಂದ್ ನವಾಬ್ ಹೆಸರಿನ ವರದಿಗಾರರೊಬ್ಬರನ್ನು 2015ರಲ್ಲಿ ಬಿಡುಗಡೆಯಾದ ’ಭಜರಂಗಿ ಭಾಯ್‌ಜಾನ್’ ಚಿತ್ರದಲ್ಲಿ ವರದಿಗಾರನ ಪಾತ್ರ ಮಾಡಿದ್ದ ನವಾಜ಼ುದ್ಧೀನ್ ಸಿದ್ಧಿಕಿ ಅನುಕರಿಸಿದ್ದನ್ನು ನೆಟ್ಟಿಗರು ಈ ವಿಡಿಯೋ ನೋಡಿ ಸ್ಮರಿಸಿದ್ದಾರೆ.
Masterclass in weather reporting. pic.twitter.com/bedXuvcEaA
— Naila Inayat (@nailainayat) June 14, 2023
Another Chand Nawab of Pakistan reporting on #BiparjoyCyclone#Gujaratcyclone pic.twitter.com/kObyvc9Wdi
— Surendra Barik (@barik_surendra) June 14, 2023