BIG NEWS:ಬಡ ಜನರಿಂದ ಬ್ಯಾಂಕ್ ಖಾತೆ ತೆರೆಸಿ ವಂಚನೆ: ಇಬ್ಬರು ಸೈಬರ್ ವಂಚಕರು ಅರೆಸ್ಟ್

ಮಂಗಳೂರು: ರಜ್ಯದಲ್ಲಿ ಆನ್ ಲೈನ್ ವಂಚನೆ ಪ್ರಕರಣ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಬಡ ಜನರ ಹೆಸರಲ್ಲಿ ಬ್ಯಾಂಕ್ ಖಾತೆತೆರೆಯಿಸಿ ಆನ್ ಲೈನ್ ಮೂಲಕ ವಂಚನೆ ಮಾಡುತ್ತಿದ್ದ ಇಬ್ಬರು ಸೈಬರ್ ವಂಚಕರನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ.

ಆರೋಪಿಗಳು ಚಿಲ್ಲರ ಹಣದಿಂದ ಬಡ ಜನರಿಂದ ಖಾತೆ ತೆರೆಸುತ್ತಿದ್ದರು, ಈ ಖಾತೆ ಮೂಲಕ ವಂಚಕರು ಶ್ರೀಮಂತರನ್ನು ಬ್ಲಾಕ್ ಮೇಲ್ ಮಾಡಿ ಹಣ ವರ್ಗಾವಣೆ ಮಾಡಿಸಿಕೊಳ್ಳುತ್ತಿದ್ದರು.

ಪುತ್ತೂರಿನಲ್ಲಿ ನಡೆದ ಒಂದು ಪ್ರಕರಣದ ತನಿಖೆಗೆ ಮುಂದಾದ ಪೊಲೀಸರಿಗೆ ಸೈಬರ್ ವಂಚನೆ ಜಾಲ ಬಯಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಪೊಲೀಸರು ಬೆಳಗಾವಿಯಲ್ಲಿ ಆರೋಪಿಗಳನ್ನು ಬಂಧಿಸಿದ್ದಾರೆ.

ಬೆಳಗಾವಿಯ ತಹಶೀಲ್ದಾರ್ ಗಲ್ಲಿಯ ಅವಿನಾಶ್ ಸುತಾರ್ (28) ರಾಅಮದೇವಗಲ್ಲಿಯ ಅನೂಪ್ ಕಾರೇಕರ್ (42) ಬಂಧಿತ ಆರೋಪಿಗಳು. ಮುಗ್ದ ಜನರ ಖಾತೆಯೇ ಇವರಿಗೆ ಖಜಾನೆಯಾಗಿತ್ತು, ಅಮಾಯಕರಿಗೆ ಚಿಲ್ಲರೇ ಹಣದಲ್ಲಿ ಬ್ಯಾಂಕ್ ಖಾತೆ ತೆರೆದು ಆಮೂಲಕ ಶ್ರೀಮಂತರಿಂದ ಹಣ ವರ್ಗಾವಣೆ ಮಾಡಿಸಿಕೊಂಡು ವಂಚಿಸುತ್ತಿದ್ದರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read