ಕೇವಲ 7 ನಿಮಿಷಗಳಲ್ಲಿ ಕ್ಯಾನ್ಸರ್‌ಗೆ ಚಿಕಿತ್ಸೆ; ಹೊಸ ಬಗೆಯ ಇಂಜೆಕ್ಷನ್‌ ಆವಿಷ್ಕಾರ !

ಕ್ಯಾನ್ಸರ್ ರೋಗಿಗಳಿಗೆ ಚಿಕಿತ್ಸೆ ನೀಡಲು ಇಂಗ್ಲೆಂಡ್ ಶೀಘ್ರದಲ್ಲೇ ಒಂದು ವಿಶಿಷ್ಟ ವಿಧಾನವನ್ನು ಆರಂಭಿಸಲಿದೆ. ಇದರಲ್ಲಿ ಕ್ಯಾನ್ಸರ್ ರೋಗಿಗೆ 7 ನಿಮಿಷಗಳ ಇಂಜೆಕ್ಷನ್ ನೀಡಲಾಗುತ್ತದೆ. ಬ್ರಿಟನ್‌ನ ಸರ್ಕಾರಿ ಆರೋಗ್ಯ ಸೇವೆ (NHS) ಈ ರೀತಿಯ ಕ್ಯಾನ್ಸರ್ ಚಿಕಿತ್ಸೆ ನೀಡಲಿರುವ ವಿಶ್ವದ ಮೊದಲ ಸಂಸ್ಥೆ. ಈ ಚುಚ್ಚುಮದ್ದಿನ ಮೂಲಕ ಬಹುಬೇಗ ರೋಗಿಗೆ ಚಿಕಿತ್ಸೆ ನೀಡಬಹುದು. ಪ್ರತಿ ವರ್ಷ ಕ್ಯಾನ್ಸರ್‌ನಿಂದ ಸಾವನ್ನಪ್ಪುತ್ತಿರುವ ರೋಗಿಗಳ ಸಂಖ್ಯೆಯಲ್ಲಿ ಗಣನೀಯ ಹೆಚ್ಚಳವಾಗಿದೆ. ಲಕ್ಷಾಂತರ ಜನರು ಈ ಕಾಯಿಲೆಗೆ ಬಲಿಯಾಗುತ್ತಿದ್ದಾರೆ.

ಮಹಿಳೆಯರಲ್ಲಿ ಸ್ತನ ಮತ್ತು ಅಂಡಾಶಯದ ಕ್ಯಾನ್ಸರ್ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಪುರುಷರಲ್ಲಿ ಪ್ರಾಸ್ಟೇಟ್ ಕ್ಯಾನ್ಸರ್ ವಿಪರೀತವಾಗಿದೆ. ಆದಾಗ್ಯೂ ಮೊದಲ ಹಂತದಲ್ಲಿ ಕ್ಯಾನ್ಸರ್ ಪತ್ತೆಯಾದರೆ ಅದರ ಚಿಕಿತ್ಸೆ ಸಾಧ್ಯ. ಈ ಚಿಕಿತ್ಸೆಗೆ ಸುದೀರ್ಘ ಸಮಯ ಬೇಕಾಗುತ್ತಿತ್ತು. ಇದೇ ಕಾರಣಕ್ಕೆ ಪರ್ಯಾಯ ವಿಧಾನಗಳನ್ನು ಆವಿಷ್ಕರಿಸಲಾಗುತ್ತಿದೆ. ಈ ಇಂಜೆಕ್ಷನ್ ಅನ್ನು ಬ್ರಿಟಿಷ್ ಮೆಡಿಸಿನ್ಸ್ ಮತ್ತು ಹೆಲ್ತ್‌ಕೇರ್ ಪ್ರಾಡಕ್ಟ್ಸ್ ರೆಗ್ಯುಲೇಟರಿ ಏಜೆನ್ಸಿ (MHRA) ಅನುಮೋದಿಸಿದೆ.

ಇಮ್ಯುನೊಥೆರಪಿ, ಅಟೆಝೋಲಿಜುಮಾಬ್ನೊಂದಿಗೆ ಚಿಕಿತ್ಸೆ ಪಡೆದ ಅನೇಕ ರೋಗಿಗಳಿಗೆ ಚರ್ಮದ ಅಡಿಯಲ್ಲಿ ಚುಚ್ಚುಮದ್ದು ನೀಡಲಾಗುತ್ತದೆ. ಅಟೆಝೋಲಿಜುಮಾಬ್ ಅನ್ನು ಟೆಸೆಂಟ್ರಿಕ್ ಎಂದೂ ಕರೆಯುತ್ತಾರೆ. ಟೆಸೆಂಟ್ರಿಕ್ ಒಂದು ಮೊನೊಕ್ಲೋನಲ್ ಪ್ರತಿಕಾಯವಾಗಿದೆ. ಇದು ಕ್ಯಾನ್ಸರ್ ರೋಗಿಯ ರೋಗನಿರೋಧಕ ಶಕ್ತಿಯ ಮೇಲೆ ಹೆಚ್ಚಿನ ಪ್ರಮಾಣದಲ್ಲಿ ಪರಿಣಾಮ ಬೀರುತ್ತದೆ. ಇದನ್ನು ಡ್ರಿಪ್ ಮೂಲಕ ನೇರವಾಗಿ ರೋಗಿಯ ರಕ್ತನಾಳಕ್ಕೆ ನೀಡಲಾಗುವುದು.

ರಕ್ತನಾಳಗಳನ್ನು ಗುರುತಿಸಲು ಸಾಧ್ಯವಾಗದಿದ್ದಾಗ ತೊಂದರೆ ಉಂಟಾಗುತ್ತದೆ. ರೋಗಿಗಳಿಗೆ ಡ್ರಿಪ್ ಹಾಕಲು 30 ನಿಮಿಷಗಳು ಅಥವಾ ಒಂದು ಗಂಟೆ ತೆಗೆದುಕೊಳ್ಳಬಹುದು. ಆದರೆ ಹೊಸ ಇಂಜೆಕ್ಷನ್‌ ಮೂಲಕ ಔಷಧವನ್ನು ನೇರವಾಗಿ ರೋಗಿಯ ರಕ್ತನಾಳಕ್ಕೆ ಕಳುಹಿಸಲು 7 ನಿಮಿಷಗಳು ಸಾಕಾಗುತ್ತವೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read