HomeKarnatakaBIG NEWS: ಕಾವೇರಿ ನೀರಿಗಾಗಿ ಮುಂದುವರೆದ ರೈತರ ಪ್ರತಿಭಟನೆ; ಬಿಸ್ಲರಿ ವಾಟರ್ ನಲ್ಲಿ ಗದ್ದೆ ನಾಟಿ...

BIG NEWS: ಕಾವೇರಿ ನೀರಿಗಾಗಿ ಮುಂದುವರೆದ ರೈತರ ಪ್ರತಿಭಟನೆ; ಬಿಸ್ಲರಿ ವಾಟರ್ ನಲ್ಲಿ ಗದ್ದೆ ನಾಟಿ ಮಾಡಿ ಆಕ್ರೋಶ ವ್ಯಕ್ತಪಡಿಸಿದ ಅನ್ನದಾತ

ಮಂಡ್ಯ: ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ಹಿನ್ನೆಲೆಯಲ್ಲಿ ಮಂಡ್ಯ ಜಿಲ್ಲೆಯಲ್ಲಿ ರೈತರ ಪ್ರತಿಭಟನೆ ಮುಂದುವರೆದಿದ್ದು, ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಂಡ್ಯದಲ್ಲಿ ನಿನ್ನೆ ತಲೆಯ ಮೇಲೆ ಕಲ್ಲು ಎತ್ತಿಕೊಂಡು ಪ್ರತಿಭಟನೆ ನಡೆಸಿದ್ದ ರೈತರು ಇಂದು ಬಿಸ್ಲರಿ ಬಾಟಲ್ ನೀರು ತಂದು ನಾಟಿ ಮಾಡಿ ಪ್ರತಿಭಟನೆ ಮಾಡಿದ್ದಾರೆ. ರೈತರ ಪ್ರತಿಭಟನೆಗೆ ರಕ್ಷಣಾ ವೇದಿಕೆ ಕಾರ್ಯಕರ್ತರು ಸಾಥ್ ನೀಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಜಿಲ್ಲಾ ರಕ್ಷಣಾ ವೇದಿಕೆ ಕಾರ್ಯಕರ್ತರು ಹಾಗೂ ರೈತರು ಮಂಡ್ಯದ ಹನುಮಂತಪುರ ಗ್ರಾಮದಲ್ಲಿ ಬಿಸ್ಲರಿ ಕ್ಯಾನ್ ಹೊತ್ತು ತಂದು ಗ್ರಾಮದ ಗದ್ದೆಯಲ್ಲಿ ಬಿಸ್ಲರಿ ನೀರು ಹಾಕಿ ನಾಟಿ ಮಾಡುವ ಮೂಲಕ ವಿನೂತನ ಪ್ರತಿಭಟನೆ ಮಾಡಿದ್ದು, ರಾಜ್ಯದ ರೈತರಿಗೆ ನೀರಿಗೆ ತತ್ವಾರ ಇದ್ದಾಗಲೂ ಕಾವೇರಿ ನೀರನ್ನು ತಮಿಳುನಾಡಿಗೆ ಬಿಟ್ಟರೆ ಇಲ್ಲಿನ ರೈತರು ಬಿಸ್ಲರಿ ನೀರಿನಲ್ಲಿ ನಾಟಿ ಮಾಡಬೇಕಾದ ಸ್ಥಿತಿ ಇದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತಕ್ಷಣ ಸರ್ಕಾರ ಕೆ.ಆರ್.ಎಸ್ ನಿಂದ ತಮಿಳುನಾಡಿಗೆ ಬಿಡುತ್ತಿರುವ ನೀರನ್ನು ನಿಲ್ಲಿಸಬೇಕು. ಇಲ್ಲವಾದಲ್ಲಿ ಇನ್ನಷ್ಟು ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular