HomeLatest Newsಸಿಎಸ್‌ಕೆ ಹೊಸ ಕೋಚ್ ರೇಸ್‌ಗೆ ಬಿಗ್ ಟ್ವಿಸ್ಟ್: ಭಾರತದ ಈ ದೈತ್ಯ ಆಟಗಾರನ ಹೆಸರು ಸೂಚಿಸಿದ...

ಸಿಎಸ್‌ಕೆ ಹೊಸ ಕೋಚ್ ರೇಸ್‌ಗೆ ಬಿಗ್ ಟ್ವಿಸ್ಟ್: ಭಾರತದ ಈ ದೈತ್ಯ ಆಟಗಾರನ ಹೆಸರು ಸೂಚಿಸಿದ ಹೇಡನ್!

ಐಪಿಎಲ್ ಇತಿಹಾಸದಲ್ಲಿ ಬಲಿಷ್ಠ ತಂಡಗಳಲ್ಲಿ ಒಂದಾದ ಚೆನ್ನೈ ಸೂಪರ್ ಕಿಂಗ್ಸ್ ತನ್ನ ಹೊಸ ಮುಖ್ಯ ಕೋಚ್ ಆಯ್ಕೆಗಾಗಿ ಹುಡುಕಾಟ ನಡೆಸುತ್ತಿದೆ. ಸುದೀರ್ಘ 18 ವರ್ಷಗಳ ಕಾಲ ತಂಡದ ಕೋಚ್ ಆಗಿದ್ದ ಸ್ಟೀಫನ್ ಫ್ಲೆಮಿಂಗ್ ನಿರ್ಗಮನದ ನಂತರ ತೆರವಾಗಿರುವ ಈ ಹುದ್ದೆಗೆ ಹಲವು ಪ್ರಸಿದ್ಧ ಹೆಸರುಗಳು ಕೇಳಿಬರುತ್ತಿವೆ. ಈ ನಡುವೆ ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಹಾಗೂ ಸಿಎಸ್ ಕೆ ತಂಡದ ಮಾಜಿ ಆಟಗಾರ ಮ್ಯಾಥ್ಯೂ ಹೇಡನ್ ಪ್ರಮುಖ ಸಲಹೆಯೊಂದನ್ನು ನೀಡಿದ್ದಾರೆ.

ತಮಿಳುನಾಡು ಮೂಲದ ಭಾರತೀಯ ಆಟಗಾರ ದಿನೇಶ್ ಕಾರ್ತಿಕ್ ಸಿಎಸ್ ಕೆ ತಂಡಕ್ಕೆ ಅತ್ಯಂತ ಸೂಕ್ತವಾದ ಕೋಚ್ ಆಗಬಲ್ಲರು ಎಂದು ಹೇಡನ್ ಅಭಿಪ್ರಾಯಪಟ್ಟಿದ್ದಾರೆ. ಚೆನ್ನೈ ನಗರದೊಂದಿಗಿನ ಸ್ಥಳೀಯ ಸಂಪರ್ಕ ಹಾಗೂ ತಮಿಳುನಾಡಿನಲ್ಲಿ ಬೆಳೆದ ಅನುಭವ ದಿನೇಶ್ ಕಾರ್ತಿಕ್ ಅವರಿಗೆ ಇದ್ದು, ಇದು ತಂಡವನ್ನು ಮುನ್ನಡೆಸಲು ಅವರಿಗೆ ದೊಡ್ಡ ಪ್ಲಸ್ ಪಾಯಿಂಟ್ ಆಗಲಿದೆ ಎಂದು ಅವರು ತಿಳಿಸಿದ್ದಾರೆ.

ಆರ್‌ಸಿಬಿ ತಂಡದ ಮೆಂಟರ್ ಆಗಿ ಕಾರ್ಯನಿರ್ವಹಿಸಿರುವ ದಿನೇಶ್ ಕಾರ್ತಿಕ್ ಅವರಿಗೆ ಕೋಚಿಂಗ್ ವಿಭಾಗದಲ್ಲೂ ಉತ್ತಮ ಅನುಭವವಿದೆ. ಚೆನ್ನೈ ಸೂಪರ್ ಕಿಂಗ್ಸ್ ನಂತಹ ದೊಡ್ಡ ಫ್ರಾಂಚೈಸಿಗೆ ಸ್ಥಳೀಯ ಮಣ್ಣಿನ ಗುಣ ತಿಳಿದಿರುವ ವ್ಯಕ್ತಿ ಮುಖ್ಯ ಕೋಚ್ ಆಗುವುದು ಹೆಚ್ಚು ಸೂಕ್ತ ಎಂದು ಹೇಡನ್ ಹೇಳಿದ್ದಾರೆ. ಎಂಎಸ್ ಧೋನಿ ಮತ್ತು ಫ್ಲೆಮಿಂಗ್ ಜೋಡಿ ಸಿಎಸ್ ಕೆ ತಂಡಕ್ಕೆ ನೀಡಿದ್ದ ಯಶಸ್ಸಿನ ಪರಂಪರೆಯನ್ನು ಮುಂದುವರಿಸಲು ಸರಿಯಾದ ಕೋಚ್ ಆಯ್ಕೆ ಅತ್ಯಗತ್ಯ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular