HomeIndia10 ವರ್ಷದ ಬಾಲಕನನ್ನು ಬಲಿ ಪಡೆದ ಮೊಸಳೆ : ರೊಚ್ಚಿಗೆದ್ದು ಮೊಸಳೆಯನ್ನೇ ಹಿಂಸಿಸಿ...

10 ವರ್ಷದ ಬಾಲಕನನ್ನು ಬಲಿ ಪಡೆದ ಮೊಸಳೆ : ರೊಚ್ಚಿಗೆದ್ದು ಮೊಸಳೆಯನ್ನೇ ಹಿಂಸಿಸಿ ಕೊಂದ ಜನ

ನವದೆಹಲಿ: 10 ವರ್ಷದ ಬಾಲಕನನ್ನು ಬಲಿ ಪಡೆದ ಮೊಸಳೆಯನ್ನು ಊರಿನ ಜನರು ಹಿಂಸಿಸಿ ಕೊಂದ ಘಟನೆ ಬಿಹಾರದ ವೈಶಾಲಿ ಜಿಲ್ಲೆಯ ರಾಘೋಪುರ್ ದಿಯಾರಾ ದ್ವೀಪದ ಖಾಲ್ಸಾ ಘಾಟ್ ನಲ್ಲಿ ನಡೆದಿದೆ.

ಮೊಸಳೆ ಬಾಲಕನನ್ನು ಬಲಿ ಪಡೆದ ಹಿನ್ನೆಲೆ ರೊಚ್ಚಿಗೆದ್ದ ಜನರು ಮೊಸಳೆಯನ್ನು ದೊಣ್ಣೆಗಳಿಂದ ಹೊಡೆದು ಕೊಂದಿದ್ದಾರೆ.

ಬಿಡ್ದುಪುರ ಪೊಲೀಸ್ ವ್ಯಾಪ್ತಿಯ ಗೋಕುಲ್ಪುರದ ನಿವಾಸಿ ಧರ್ಮೇಂದ್ರ ದಾಸ್ ತನ್ನ ಕುಟುಂಬದೊಂದಿಗೆ ಧಾರ್ಮಿಕ ಸಮಾರಂಭಕ್ಕಾಗಿ ಗಂಗಾ ನದಿಯ ದಡಕ್ಕೆ ಬಂದಿದ್ದರು. ಧರ್ಮೇಂದ್ರ ಅವರ 10 ವರ್ಷದ ಮಗ ಅಂಕಿತ್ ಆಚರಣೆಗೆ ನೀರು ತರಲು ನದಿಯ ಬಳಿ ಬಂದಾಗ, ಇದ್ದಕ್ಕಿದ್ದಂತೆ ಮೊಸಳೆ ಅವನನ್ನು ಹಿಡಿದು ತಿಂದು ಹಾಕಿತ್ತು.
ಘಟನೆ ಸಂಬಂಧ ತನಿಖೆ ನಡೆಯುತ್ತಿದ್ದು, ಮೊಸಳೆಯನ್ನು ಕೊಂದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular