HomeLatest Newsಶಾಸಕರ ಭವನದ ಕಾರುಗಳ ಅನಗತ್ಯ ಬಳಕೆ ತಡೆಗೆ ಕಠಿಣ ನಿರ್ಧಾರ ಕೈಗೊಂಡ ವಿಧಾನಸಭೆ ಕಾರ್ಯಾಲಯ

ಶಾಸಕರ ಭವನದ ಕಾರುಗಳ ಅನಗತ್ಯ ಬಳಕೆ ತಡೆಗೆ ಕಠಿಣ ನಿರ್ಧಾರ ಕೈಗೊಂಡ ವಿಧಾನಸಭೆ ಕಾರ್ಯಾಲಯ

ಬೆಂಗಳೂರು: ಶಾಸಕರ ಭವನದಲ್ಲಿನ ಸರ್ಕಾರಿ ವಾಹನಗಳ ಅನಗತ್ಯ ಬಳಕೆ ಹಾಗೂ ದುರ್ಬಳಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ವಿಧಾನಸಭೆ ಕಾರ್ಯಾಲಯವು ಮಹತ್ವದ ಮತ್ತು ಕಠಿಣ ನಿರ್ಧಾರವನ್ನು ಕೈಗೊಂಡಿದೆ.

ಇನ್ನು ಮುಂದೆ ವಾಹನಗಳ ದುರ್ಬಳಕೆಯಾದಲ್ಲಿ ನೇರವಾಗಿ ಶಾಸಕರ ವೇತನದಿಂದಲೇ ಬಾಡಿಗೆ ಮೊತ್ತವನ್ನು ವಸೂಲಿ ಮಾಡಲು ಕಾರ್ಯಾಲಯ ಮುಂದಾಗಿದೆ.ಹೊರಡಿಸಿರುವ ಈ ಹೊಸ ನಿಯಮಾವಳಿಗಳು ಹಾಲಿ ಮತ್ತು ಮಾಜಿ ಶಾಸಕರಿಗೆ ಅನ್ವಯವಾಗಲಿದೆ.

ವಿಧಾನಸಭೆ ಕಾರ್ಯದರ್ಶಿ ಎಂ.ಕೆ. ವಿಶಾಲಾಕ್ಷಿ ಅವರು, ಹಾಲಿ ಹಾಗೂ ಮಾಜಿ ಶಾಸಕರಿಗಾಗಿ ಶಾಸಕರ ಭವನದಲ್ಲಿರುವ ವಾಹನಗಳ ಬಳಕೆಗೆ ಸಂಬಂಧಿಸಿದಂತೆ ಈ ಹೊಸ ಮಾರ್ಗಸೂಚಿಗಳನ್ನು ಹೊರಡಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಶಾಸಕರ ಹೆಸರಿನಲ್ಲಿ ಬಳಸಲಾಗುವ ವಾಹನಗಳ ಬಾಡಿಗೆಯನ್ನು ಇನ್ನು ಮುಂದೆ ಆಯಾ ಶಾಸಕರ ವೇತನದಿಂದಲೇ ನೇರವಾಗಿ ಕಡಿತಗೊಳಿಸಲಾಗುತ್ತದೆ. ಇದು ವಾಹನಗಳ ಜವಾಬ್ದಾರಿಯುತ ಬಳಕೆಯನ್ನು ಖಾತ್ರಿಪಡಿಸುವ ಉದ್ದೇಶ ಹೊಂದಿದೆ.ಈವರೆಗೆ ಶಾಸಕರು ತಮ್ಮ ವೈಯಕ್ತಿಕ ಸಹಾಯಕರು (ಪಿಎ) ಅತಿಥಿಗಳು ಅಥವಾ ಪರಿಚಯಸ್ಥರ ಬಳಕೆಗಾಗಿ ವಾಹನಗಳನ್ನು ಪಡೆಯಲು ಶಿಫಾರಸು ಮಾಡುತ್ತಿದ್ದರು. ಇನ್ನು ಮುಂದೆ ಈ ಪದ್ಧತಿಗೆ ಸಂಪೂರ್ಣ ಬ್ರೇಕ್ ಹಾಕಲಾಗಿದೆ.

ವಾಹನಗಳ ಬಳಕೆಯನ್ನು ಕೇವಲ ‘ಗ್ರೇಟರ್ ಬೆಂಗಳೂರು’ ಪ್ರಾಧಿಕಾರದ ವ್ಯಾಪ್ತಿಗೆ ಮಾತ್ರ ಸೀಮಿತಗೊಳಿಸಲಾಗಿದೆ. ಅಧಿಕೃತ ಕಾರ್ಯಗಳಿಗೆ ಹೊರತುಪಡಿಸಿ, ಅನಗತ್ಯವಾಗಿ ವಾಹನಗಳನ್ನು ಬಳಸುವಂತಿಲ್ಲ.ಹಿಂದಿನ ದಿನಗಳಲ್ಲಿ ಶಾಸಕರ ಭವನದಲ್ಲಿರುವ ಸರ್ಕಾರಿ ವಾಹನಗಳು ಹೆಚ್ಚಿನ ಸಂಖ್ಯೆಯಲ್ಲಿ ಖಾಸಗಿ ಕಾರ್ಯಗಳಿಗೆ ಹಾಗೂ ಶಾಸಕರ ಆಪ್ತರಿಂದ ಬಳಸಲ್ಪಡುತ್ತಿವೆ ಎಂಬ ಆರೋಪಗಳು ಕೇಳಿಬಂದಿದ್ದವು. ಅಲ್ಲದೆ, ಸರ್ಕಾರಿ ಖಜಾನೆಗೆ ಇದರಿಂದ ಆರ್ಥಿಕ ನಷ್ಟ ಉಂಟಾಗುತ್ತಿತ್ತು.

ಶಾಸಕರು ತಮ್ಮ ವೈಯಕ್ತಿಕ ಸಹಾಯಕರು, ಅತಿಥಿಗಳು ಅಥವಾ ಪರಿಚಯಸ್ಥರ ಓಡಾಟಕ್ಕಾಗಿ ಸರ್ಕಾರಿ ವಾಹನಗಳನ್ನು ಶಿಫಾರಸು ಮಾಡುವಂತಿಲ್ಲ. ವಾಹನಗಳನ್ನು ಕೇವಲ ಅಧಿಕೃತ ಕರ್ತವ್ಯಗಳಿಗೆ ಮಾತ್ರ ಬಳಸಬೇಕು.

ಒಂದು ವೇಳೆ ನಿಯಮ ಉಲ್ಲಂಘಿಸಿ ವಾಹನವನ್ನು ವೈಯಕ್ತಿಕ ಕೆಲಸಗಳಿಗೆ ಬಳಸಿದ್ದು ಕಂಡುಬಂದಲ್ಲಿ, ಅದಕ್ಕೆ ತಗಲುವ ಬಾಡಿಗೆ ಅಥವಾ ದಂಡದ ಮೊತ್ತವನ್ನು ಸಂಬಂಧಪಟ್ಟ ಶಾಸಕರ ಮಾಸಿಕ ವೇತನದಿಂದಲೇ ನೇರವಾಗಿ ಕಡಿತಗೊಳಿಸಲಾಗುತ್ತದೆ.ಈ ಕಠಿಣ ಕ್ರಮದಿಂದಾಗಿ ಸರ್ಕಾರಿ ವಾಹನಗಳ ಅನಗತ್ಯ ದುರ್ಬಳಕೆಗೆ ಕಡಿವಾಣ ಬೀಳಲಿದ್ದು, ಸಾರ್ವಜನಿಕ ಹಣದ ಉಳಿತಾಯಕ್ಕೂ ದಾರಿ ಮಾಡಿಕೊಡಲಿದೆ.

ಈ ಹಿನ್ನೆಲೆಯಲ್ಲಿ, ಸರ್ಕಾರಿ ಆಸ್ತಿಯ ದುರ್ಬಳಕೆಯನ್ನು ತಡೆಗಟ್ಟಿ, ಪಾರದರ್ಶಕತೆಯನ್ನು ಕಾಯ್ದುಕೊಳ್ಳಲು ಕಾರ್ಯಾಲಯವು ಈ ಕಠಿಣ ಕ್ರಮಗಳನ್ನು ಜಾರಿಗೆ ತಂದಿದೆ.ಈ ಕಠಿಣ ನಿಯಮಗಳ ಜಾರಿಯಿಂದಾಗಿ, ಇನ್ನು ಮುಂದೆ ವಾಹನಗಳ ದುರ್ಬಳಕೆಗೆ ಕಡಿವಾಣ ಬೀಳುವ ನಿರೀಕ್ಷೆಯಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular