HomeIndiaBIG NEWS: ಒಡಿಶಾ ಭೀಕರ ರೈಲು ಅಪಘಾತದ ಬೆನ್ನಲ್ಲೇ ಸಮಯಪ್ರಜ್ಞೆಯಿಂದ ತಪ್ಪಿದ ಮತ್ತೊಂದು ಘೋರ ದುರಂತ

BIG NEWS: ಒಡಿಶಾ ಭೀಕರ ರೈಲು ಅಪಘಾತದ ಬೆನ್ನಲ್ಲೇ ಸಮಯಪ್ರಜ್ಞೆಯಿಂದ ತಪ್ಪಿದ ಮತ್ತೊಂದು ಘೋರ ದುರಂತ

ಒಡಿಶಾದಲ್ಲಿ ಭೀಕರ ರೈಲು ಅಪಘಾತ ದುರಂತದ ಬೆನ್ನಲ್ಲೇ ತಮಿಳುನಾಡಿನಲ್ಲಿ ಸಂಭವನೀಯ ರೈಲು ದುರಂತವೊಂದು ಸಮಯಪ್ರಜ್ಞೆಯಿಂದ ತಪ್ಪಿದೆ.

ಶೆಂಗೊಟ್ಟೈನಲ್ಲಿ ಕೊಲ್ಲಂ ಜಂಕ್ಷನ್-ಚೆನ್ನೈ ಎಗ್ಮೋರ್ ಎಕ್ಸ್ ಪ್ರೆಸ್ (16102) ರೈಲಿನ ಚಕ್ರದ ಮೇಲಿರುವ ಕೋಚ್‌ನ ತಳದಲ್ಲಿ ಭಾರಿ ಬಿರುಕು ಕಾಣಿಸಿಕೊಂಡಿರುವುದನ್ನು ರೈಲ್ವೆ ಸಿಬ್ಬಂದಿ ಭಾನುವಾರ ಗಮನಿಸಿದ್ದರಿಂದ ದೊಡ್ಡ ರೈಲು ಅಪಘಾತವನ್ನು ತಪ್ಪಿಸಲಾಗಿದೆ. ಮಧ್ಯಾಹ್ನ 3 ಗಂಟೆ ಸುಮಾರಿಗೆ ಹಾನಿ ವರದಿಯಾದ ನಂತರ ನಿರ್ದಿಷ್ಟ ಕೋಚ್ (S3) ರೈಲಿನಿಂದ ಬೇರ್ಪಟ್ಟಿತು. ಒಂದೂವರೆ ಗಂಟೆಗಳ ವಿಳಂಬದ ನಂತರ ರೈಲು ಮಧುರೈಗೆ ಹೊರಟಿತು. ಅಲ್ಲಿ ಮತ್ತೊಂದು ಕೋಚ್ ಅನ್ನು ಜೋಡಿಸಲಾಯಿತು.

ಎಸ್ 3 ಕೋಚ್‌ನ ಪ್ರಯಾಣಿಕರನ್ನು ಮತ್ತೊಂದು ಕೋಚ್‌ನಲ್ಲಿ ಪ್ರಯಾಣಿಸಲು ಸೂಚಿಸಲಾಯಿತು ಎಂದು ರೈಲ್ವೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಬಿರುಕು ಗಮನಿಸದೆ ಹೋಗಿದ್ದರೆ, ನಾವು ದೊಡ್ಡ ದುರಂತಕ್ಕೆ ಸಾಕ್ಷಿಯಾಗುತ್ತಿದ್ದೆವು ಎಂದು ರೈಲ್ವೆ ಕಾರ್ಮಿಕರೊಬ್ಬರು ಹೇಳಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular