HomeKarnatakaBREAKING NEWS: ಹಸುಗಳ ಮೇಲೆ ಆಸಿಡ್, ಕಾದ ಎಣ್ಣೆ ಸುರಿದು ಕಿಡಿಗೇಡಿಗಳಿಂದ ವಿಕೃತಿ

BREAKING NEWS: ಹಸುಗಳ ಮೇಲೆ ಆಸಿಡ್, ಕಾದ ಎಣ್ಣೆ ಸುರಿದು ಕಿಡಿಗೇಡಿಗಳಿಂದ ವಿಕೃತಿ

ಕೋಲಾರ: ಹಸುವನ್ನು ಗೋಮಾತೆ, ಕಾಮಧೇನು ಎಂದು ಪೂಜಿಸುತ್ತೇವೆ. ಆದರೆ ಇತ್ತೀಚಿನ ದಿನಗಳಲ್ಲಿ ಗೋವಿನ ಮೇಲೂ ಕ್ರೌರ್ಯ ಮೆರೆಯುತ್ತಿರುವ ಘಟನೆಗಳು ಬೆಳಕಿಗೆ ಬರುತ್ತಿವೆ. ದುಷ್ಕರ್ಮಿಗಳು ಹಸುಗಳ ಮೇಲೆ ಆಸಿಡ್ ಹಾಗೂ ಕಾದ ಎಣ್ಣೆ ಎರಚಿ ವಿಕೃತಿ ಮೆರೆದಿರುವ ಘಟನೆ ಕೋಲಾರದಲ್ಲಿ ನಡೆದಿದೆ.

ಕೋಲಾರದ ರೆಹಮತ್ ನಲ್ಲಿದಲ್ಲಿ ಈ ಘಟನೆ ನಡೆದಿದೆ. ಕಿಡಿಗೇಡಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ. ಗಾಯಾಳು ಹಸುಗಳಿಗೆ ಚಿಕಿತ್ಸೆ ನೀಡುವಂತೆ ಒತ್ತಾಯಿಸುತ್ತಿದ್ದಾರೆ.

ಹಸುಗಳ ಮೇಲೆ ಆಸಿಡ್, ಕಾದ ಎಣ್ಣೆ ಸುರಿದು ಅಮಾನುಷವಾಗಿ ನಡೆದುಕೊಳ್ಳಲಾಗುರುವ ಬಗ್ಗೆ ಬಜರಂಗದಳ ಮುಖಂಡರು ಗಲ್ ಪೇಟೆ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular