HomeKarnatakaಬಿಜೆಪಿಯ ಆಡಳಿತ ವೈಫಲ್ಯವನ್ನು ರುಜುವಾತು ಮಾಡಲು ಕೋವಿಡ್ ಹಗರಣವೊಂದೇ ಸಾಕು : ಡಿಸಿಎಂ ಡಿಕೆಶಿ

ಬಿಜೆಪಿಯ ಆಡಳಿತ ವೈಫಲ್ಯವನ್ನು ರುಜುವಾತು ಮಾಡಲು ಕೋವಿಡ್ ಹಗರಣವೊಂದೇ ಸಾಕು : ಡಿಸಿಎಂ ಡಿಕೆಶಿ

ಬೆಳಗಾವಿ : ಬಿಜೆಪಿಯ ಆಡಳಿತ ವೈಫಲ್ಯವನ್ನು ರುಜುವಾತು ಮಾಡಲು ಕೋವಿಡ್ ಹಗರಣವೊಂದೇ ಸಾಕು ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ.

ಬೆಳಗಾವಿ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಇಂದು ಸುದ್ದಿಗಾರರ ಜೊತೆ ಮಾತನಾಡಿದ ಡಿಕೆಶಿ ಬಿಜೆಪಿ ಬಿಡುಗಡೆ ಮಾಡಿರುವ ಪ್ರಣಾಳಿಕೆಗಳಲ್ಲಿ ಮತ್ತೆ ಹಳೆಯ ವಿಷಯಗಳೇ ಪ್ರಸ್ತಾಪವಾಗಿವೆ ಹೊರತು ಯಾವುದೂ ಹೊಸತನವಿಲ್ಲ. ಮತ್ತೆ ಅದೇ ಸುಳ್ಳುಗಳು, ಭಾವನೆಗಳ ಮೇಲೆ ರಾಜಕೀಯ ಮಾಡುವ ಯತ್ನ ಮಾಡಲಾಗಿದೆ.

ಬಿಜೆಪಿಯ ಆಡಳಿತ ವೈಫಲ್ಯವನ್ನು ಋಜುವಾತು ಮಾಡಲು ಕೋವಿಡ್ ಹಗರಣವೊಂದೇ ಸಾಕು. 20 ಲಕ್ಷ ಕೋಟಿ ಪರಿಹಾರ ನೀಡುವುದಾಗಿ ಬಿಜೆಪಿ ಸರ್ಕಾರ ಘೋಷಿಸಿತ್ತು, ಅದರ ಲೆಕ್ಕ ಕೊಡಲಿ. ಯಾರಿಗೆ ಎಷ್ಟು ಹಣ ಹೋಗಿದೆ ಎಂದು ಬಹಿರಂಗಪಡಿಸಲಿ. ಬಿಜೆಪಿ ಭರವಸೆ ನೀಡಿದಂತೆ ವರ್ಷಕ್ಕೆ 2 ಕೋಟಿ ಉದ್ಯೋಗವೂ ಸೃಷ್ಟಿಯಾಗಲಿಲ್ಲ. ರೈತರ ಆದಾಯ ಡಬಲ್ ಕೂಡ ಆಗಲಿಲ್ಲ ಎಂದು ತಿಳಿಸಿದೆ. ಇನ್ನು ಎಚ್.ಡಿ. ಕುಮಾರಸ್ವಾಮಿ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿ, ‘ಕುಮಾರಸ್ವಾಮಿ ಹೇಗಿದ್ದರೂ ಎಂಪಿಯಾಗುವುದಿಲ್ಲ. ಅವರು ಹೆದರಿ ಪಕ್ಕದ ಜಿಲ್ಲೆಗೆ ಹೋಗಿದ್ದಾರೆ. ಚರ್ಚೆ ಮಾಡಲು ಸದನಕ್ಕೆ ಬರಲಿʼ ಎಂದು ಸವಾಲು ಹಾಕಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

 

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular