ಡಾನ್ಸ್​ ಮಾಡಲು ಮಗನನ್ನು ನಿದ್ದೆಯಿಂದ ಎಬ್ಬಿಸಿದ ಪಾಲಕರು: ವಿಡಿಯೋ ವೈರಲ್

ತಮ್ಮ ಮಗನನ್ನು ನಿದ್ರೆಯಿಂದ ಎಬ್ಬಿಸಿ ಅಪ್ಪ-ಅಮ್ಮ ಗಂಗ್ನಮ್ ಸ್ಟೈಲ್‌ಗೆ ನೃತ್ಯ ಮಾಡುತ್ತಿರುವ ವಿಡಿಯೋ ಒಂದು ವೈರಲ್​ ಆಗಿದ್ದು, ಜನರನ್ನು ನಗೆಗಡಲಿನಲ್ಲಿ ತೇಲಿಸಿದೆ.

ಈಗ ವೈರಲ್ ಆಗಿರುವ ವಿಡಿಯೋದಲ್ಲಿ ದಂಪತಿ ಗಂಗ್ನಮ್ ಸ್ಟೈಲ್ ಡಾನ್ಸ್​ ಮಾಡಲು ಇಚ್ಛಿಸಿದರು. ಅದಕ್ಕಾಗಿ ಕೋಣೆಯಲ್ಲಿ ಮಲಗಿರುವ ಮಗನನ್ನು ಎಬ್ಬಿಸಿದ್ದಾರೆ.

ಆತನ ದೇಹದಿಂದ ಹೊದಿಕೆಯನ್ನು ತೆಗೆದುಹಾಕಿ ಮತ್ತು ನಂತರ ಅವನನ್ನು ಎತ್ತಿಕೊಂಡು ನೃತ್ಯ ಮಾಡುವಲ್ಲಿ ಕರೆದುಕೊಂಡು ಹೋಗುತ್ತಾರೆ.

ನಿದ್ದೆ ಗುಂಗಿನಲ್ಲಿ ಇರುವ ಮಗನಿಗೆ ಏನು ಮಾಡಬೇಕು ಎಂದು ತಿಳಿಯುವುದಿಲ್ಲ. ಕೊನೆಗೆ ಆತನೂ ಹೆಜ್ಜೆ ಹಾಕುತ್ತಾನೆ. ಅಪ್ಪ-ಅಮ್ಮನ ಈ ಕೃತ್ಯಕ್ಕೆ ಹಲವರು ಕೆಂಗಣ್ಣು ಬೀರಿದ್ದಾರೆ. ಅವರು ನೃತ್ಯ ಮಾಡಲು ನಿದ್ದೆ ಮಾಡಿದ ಮಗನನ್ನು ಎಬ್ಬಿಸಿರುವುದು ಸರಿಯಲ್ಲ ಎಂದಿದ್ದರೆ ಇನ್ನು ಹಲವರು ಇದು ತುಂಬಾ ಮಜವಾಗಿದೆ ಎಂದಿದ್ದಾರೆ.

https://www.youtube.com/watch?v=d5beGkic_UY&feature=youtu.be

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read