HomeLatest Newsಸಾವಿನಲ್ಲೂ ಒಂದಾದ ದಂಪತಿ: ಹೃದಯಾಘಾತದಿಂದ ಪತಿ ಸಾವು, ಅಂತ್ಯಕ್ರಿಯೆ ಮುಗಿಸಿ ಬಂದ ಪತ್ನಿಯೂ ಕೊನೆಯುಸಿರು

ಸಾವಿನಲ್ಲೂ ಒಂದಾದ ದಂಪತಿ: ಹೃದಯಾಘಾತದಿಂದ ಪತಿ ಸಾವು, ಅಂತ್ಯಕ್ರಿಯೆ ಮುಗಿಸಿ ಬಂದ ಪತ್ನಿಯೂ ಕೊನೆಯುಸಿರು

ವಿಜಯನಗರ: ವಿಜಯನಗರ ಜಿಲ್ಲೆ ಖಾನಾಹೊಸಹಳ್ಳಿ ಗುಡೆಕೋಟೆ ಸಮೀಪದ ರಾಮದುರ್ಗದಲ್ಲಿ ಸಾವಿನಲ್ಲಿಯೂ ದಂಪತಿ ಒಂದಾಗಿದ್ದಾರೆ.

ಹೃದಯಾಘಾತದಿಂದ ಮೃತಪಟ್ಟಿದ್ದ ಪತಿ ಅಂತ್ಯಕ್ರಿಯೆ ಮುಗಿಸಿ ತವರು ಮನೆಗೆ ವಾಪಸ್ ಬಂದಿದ್ದ ಪತ್ನಿಯೂ 24 ಗಂಟೆಯೊಳಗೆ ಹೃದಯಾಘಾತ ಸಂಭವಿಸಿ ಮೃತಪಟ್ಟಿದ್ದಾರೆ. ಸಂಡೂರು ತಾಲೂಕಿನ ತೋಕೇನಹಳ್ಳಿ ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕ ಸಣ್ಣ ಹನುಮಂತಪ್ಪ(55) ಬುಧವಾರ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಪತಿ ಅಗಲಿಕೆ ನೋವಿನಲ್ಲಿ ಪತ್ನಿ ಸುಜಾತಾ(50) ಗುರುವಾರ ಬೆಳಗಿನ ಜಾವ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ.

ಸಣ್ಣಹನುಮಂತಪ್ಪ, ಸುಜಾತಾ ಅವರ ಮದುವೆಯಾಗಿ 25 ವರ್ಷಗಳಾಗಿವೆ. ರಾಮದುರ್ಗದ ಸುಜಾತಾ ಅವರನ್ನು ಮದುವೆಯಾಗಿದ್ದ ಹನುಮಂತಪ್ಪ ಪತ್ನಿಯ ಊರಿನಲ್ಲೇ ವಾಸವಾಗಿದ್ದರು. ಪುತ್ರಿ ಸೇರಿ ಅಪಾರ ಬಂಧು ಬಳಗವನ್ನು ದಂಪತಿ ಅಗಲಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular