HomeIndia'ಪ್ರೇಮಿಗಳ ದಿನ' ದಂದೇ ನೀರಿನಲ್ಲಿ ಮುಳುಗಿ ಮೃತಪಟ್ಟ ಯುವ ಜೋಡಿ

‘ಪ್ರೇಮಿಗಳ ದಿನ’ ದಂದೇ ನೀರಿನಲ್ಲಿ ಮುಳುಗಿ ಮೃತಪಟ್ಟ ಯುವ ಜೋಡಿ

ಗೋವಾ ಪ್ರವಾಸಕ್ಕೆ ಬಂದಿದ್ದ ಉತ್ತರ ಪ್ರದೇಶದ ಯುವ ಜೋಡಿಯೊಂದು ಪ್ರೇಮಿಗಳ ದಿನದಂದೇ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ದಾರುಣ ಘಟನೆ ನಡೆದಿದೆ.

26 ವರ್ಷದ ಸುಪ್ರಿಯ ದುಬೆ ಹಾಗೂ 27 ವರ್ಷದ ವಿಭು ಶರ್ಮಾ ಮೃತಪಟ್ಟ ಜೋಡಿಯಾಗಿದ್ದು, ಇವರುಗಳು ಪಲೋಲೆಮ್ ಬೀಚ್ ನಲ್ಲಿ ಈಜಲು ತೆರಳಿದ್ದ ವೇಳೆ ಈ ದುರಂತ ಸಂಭವಿಸಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕಳೆದ ಕೆಲವು ದಿನಗಳಿಂದ ಈ ಜೋಡಿ ಗೋವಾ ಪ್ರವಾಸದಲ್ಲಿದ್ದು, ಈಜಲು ಹೋದಾಗ ಮೊದಲಿಗೆ ಸುಪ್ರಿಯಾ ದುಬೆ ಮುಳುಗಿದ್ದಾರೆ. ಅವರನ್ನು ರಕ್ಷಿಸಲು ಹೋದ ವಿಭು ಶರ್ಮಾ ಕೂಡ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.

ಇಬ್ಬರ ಮೃತದೇಹಗಳನ್ನು ಹೊರ ತೆಗೆದಿರುವ ರಕ್ಷಣಾ ಸಿಬ್ಬಂದಿ ಉತ್ತರ ಪ್ರದೇಶದಲ್ಲಿರುವ ಅವರ ಕುಟುಂಬಸ್ಥರಿಗೆ ವಿಷಯ ಮುಟ್ಟಿಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular