ದೆಹಲಿ ಮೆಟ್ರೋ ಆಗಾಗ ಸುದ್ದಿಯಲ್ಲಿರುತ್ತದೆ. ಇದಕ್ಕೆ ಕಾರಣ ಮೆಟ್ರೋದಲ್ಲಿ ಸಂಚರಿಸುವ ಕೆಲ ಯುವ ಜೋಡಿಗಳ ನಾಚಿಕೆಗೇಡಿ ಕೃತ್ಯ. ಇತರೆ ಪ್ರಯಾಣಿಕರ ಸಮ್ಮುಖದಲ್ಲೇ ಇಂತಹ ಜೋಡಿ ಲಜ್ಜೆ ಬಿಟ್ಟು ಅಶ್ಲೀಲ ಚಟುವಟಿಕೆಗಳಲ್ಲಿ ತೊಡಗುತ್ತಿದ್ದು ಇದಕ್ಕೆ ಪುಷ್ಟಿ ನೀಡುವಂತಹ ಹಲವಾರು ವಿಡಿಯೋಗಳು ಈಗಾಗಲೇ ವೈರಲ್ ಆಗಿವೆ.
ಇದಕ್ಕೆ ಸೇರ್ಪಡೆ ಎಂಬಂತೆ ಮತ್ತೊಂದು ಇಂತಹ ವಿಡಿಯೋ ವೈರಲ್ ಆಗಿದ್ದು, ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದೆ. ಮೆಟ್ರೋದಲ್ಲಿ ಪ್ರಯಾಣಿಸುತ್ತಿದ್ದ ಈ ಯುವ ಜೋಡಿ ಮೊದಲಿಗೆ ತಾವು ನಿಂತಿದ್ದ ಸ್ಥಳದಲ್ಲಿ ಸರಸ ಸಲ್ಲಾಪ ನಡೆಸಿದೆ. ಇದು ಸಾಲದೆಂಬಂತೆ ಮತ್ತೆ ಸೀಟಿನಲ್ಲಿ ಕುಳಿತಾಗಲೂ ಇದನ್ನೇ ಮುಂದುವರಿಸಿದೆ. ಸಹ ಪ್ರಯಾಣಿಕರೊಬ್ಬರು ತಮ್ಮ ಮೊಬೈಲ್ ನಲ್ಲಿ ಈ ದೃಶ್ಯಗಳನ್ನು ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದಾರೆ.
ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ನಾನಾ ರೀತಿಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ. ನಾಲ್ಕು ಗೋಡೆಗಳ ಮಧ್ಯೆ ಇರಬೇಕಾದ ಇಂತಹ ಪ್ರೀತಿ ಮಕ್ಕಳು, ಮಹಿಳೆಯರು, ವೃದ್ಧರು ಓಡಾಡುವಂತಹ ಮೆಟ್ರೋದಲ್ಲಿ ಮಾಡಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ. ಮತ್ತಷ್ಟು ಮಂದಿ ಈ ಯುವ ಜೋಡಿಯ ಖಾಸಗಿ ಕ್ಷಣಗಳನ್ನು ಮೊಬೈಲ್ ನಲ್ಲಿ ಸೆರೆಹಿಡಿದು ಸಾರ್ವಜನಿಕಗೊಳಿಸಿರುವುದು ಸರಿಯಲ್ಲ ಎಂದು ಅಪಸ್ವರ ಎತ್ತಿದ್ದಾರೆ. ಇದಕ್ಕೆ ನಿಮ್ಮ ಅಭಿಪ್ರಾಯವೇನು ಹೇಳಿ.
देखिए दिल्ली मेट्रो मे अश्लील हरकतें करता दिखा एक कपल #viralvideo #dmrc pic.twitter.com/SOl5ePeX2O
— Lavely Bakshi (@lavelybakshi) August 17, 2024