ಮದ್ಯ ಪ್ರಿಯರು ಸೇರಿ ಬೆಲೆ ಏರಿಕೆಯಿಂದ ತತ್ತರಿಸಿದ ಜನತೆಗೆ ಮತ್ತೆ ಬಿಗ್ ಶಾಕ್: ಆಹಾರ, ಮದ್ಯ ಸೇರಿ ವಿವಿಧ ಉತ್ಪನ್ನಗಳ ದರ ಶೇ. 10 ರಷ್ಟು ಹೆಚ್ಚಳ

ನವದೆಹಲಿ: ಅಗತ್ಯ ವಸ್ತುಗಳ ದರ ಏರಿಕೆಯಿಂದ ಕಂಗಾಲಾಗಿರುವ ಗ್ರಾಹಕರಿಗೆ ಗಾಯದ ಮೇಲೆ ಬರೆ ಎಳೆದಂತೆ ಮತ್ತೆ ಬೆಲೆ ಏರಿಕೆ ಆತಂಕ ಎದುರಾಗಿದೆ.

ಪ್ಯಾಕ್ ಮಾಡಿದ ಅನೇಕ ಆಹಾರ ಉತ್ಪನ್ನಗಳು, ಡೇರಿ ಉತ್ಪನ್ನಗಳು, ಮದ್ಯ, ರೆಫ್ರಿಜರೇಟರ್, ಎಸಿ ಮತ್ತು ಆಮದಾಗುವ ರೆಡಿಮೇಡ್ ಉಡುಪುಗಳ ದರ ಶೇಕಡ 3 ರಿಂದ ಶೇಕಡ 10ರವರೆಗೆ ಏರಿಕೆಯಾಗಲಿದೆ.

ವಿವಿಧ ಉತ್ಪನ್ನ, ವಸ್ತುಗಳ ದರ ಕನಿಷ್ಠ ಶೇಕಡ 3 ರಿಂದ ಗರಿಷ್ಠ ಶೇಕಡ 10 ರಷ್ಟು ಏರಿಕೆಯಾಗುವುದನ್ನು ಪ್ರಮುಖ ಅಧಿಕಾರಿಗಳು ದೃಢಪಡಿಸಿದ್ದಾರೆ. ರೂಪಾಯಿ ಮೌಲ್ಯ ಕುಸಿತ, ಹಣದುಬ್ಬರ ಏರಿಕೆಯ ಪರಿಣಾಮ ಉತ್ಪಾದನಾ ವೆಚ್ಚದಲ್ಲಿ ಹೆಚ್ಚಳವಾಗಿದೆ. ಹೆಚ್ಚಳದ ಅಲ್ಪ ಭಾಗವನ್ನು ಗ್ರಾಹಕರಿಗೆ ವರ್ಗಾಯಿಸಲು ಕಂಪನಿಗಳು ಮುಂದಾಗಿದ್ದು, ಮಾರ್ಚ್, ಏಪ್ರಿಲ್ ನಲ್ಲಿ ವಿವಿಧ ಉತ್ಪನ್ನಗಳು ಮತ್ತು ವಸ್ತುಗಳ ದರ ಶೇಕಡ 3 ರಿಂದ 10 ರಷ್ಟು ಹೆಚ್ಚಳವಾಗಲಿದೆ ಎಂದು ಹೇಳಲಾಗಿದೆ.

ಪ್ಯಾಕ್ ಮಾಡಲಾದ ಆಹಾರ ಮತ್ತು ಡೈರಿ ಉತ್ಪನ್ನಗಳು, ಮದ್ಯ, ರೆಫ್ರಿಜರೇಟರ್‌ಗಳು, ಹವಾನಿಯಂತ್ರಣಗಳು, ಆಮದು ಮಾಡಿಕೊಂಡ ಉಡುಪುಗಳು ಮತ್ತು ವೈಯಕ್ತಿಕ ಆರೈಕೆ ಉತ್ಪನ್ನಗಳು ಸೇರಿದಂತೆ ಹಲವಾರು ಗ್ರಾಹಕ ವಸ್ತುಗಳ ಬೆಲೆಗಳು ರೂಪಾಯಿ ಮೌಲ್ಯದ ಕುಸಿತದ ಪರಿಣಾಮದೊಂದಿಗೆ 10% ವರೆಗೆ ಹೆಚ್ಚಾಗಲಿವೆ. ಮುಂದಿನ 1-2 ತಿಂಗಳುಗಳಲ್ಲಿ 3-10% ರಷ್ಟು ಪ್ರಸ್ತಾವಿತ ಬೆಲೆ ಹೆಚ್ಚಳವು ಇನ್ನೂ ಇರುತ್ತದೆ ಎಂದು ಹೇಳಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read