HomeHealthಅಜೀರ್ಣ, ಹೊಟ್ಟೆನೋವು ಸಮಸ್ಯೆ ಕಾಡಿದರೆ ತಪ್ಪದೇ ಸೇವಿಸಿ ಈ ಕಷಾಯ

ಅಜೀರ್ಣ, ಹೊಟ್ಟೆನೋವು ಸಮಸ್ಯೆ ಕಾಡಿದರೆ ತಪ್ಪದೇ ಸೇವಿಸಿ ಈ ಕಷಾಯ

 

ನೀವು ಸರಿಯಾದ ಆಹಾರವನ್ನು ಸೇವಿಸದಿದ್ದಾಗ ಅಜೀರ್ಣ ಸಮಸ್ಯೆ ಉಂಟಾಗಿ ಹೊಟ್ಟೆ ನೋವಿನಿಂದ ಬಳಲುತ್ತೀರಿ. ಇದಕ್ಕೆ ಔಷಧಿಗಳನ್ನು ಸೇವಿಸುವ ಬದಲು ಮೊದಲಿಗೆ ಈ ಮನೆ ಮದ್ದನ್ನು ಸೇವಿಸಿ. ಇದರಿಂದ ಹೊಟ್ಟೆ ನೋವು ಬೇಗ ವಾಸಿಯಾಗುತ್ತದೆ.

ಸೊಂಪನ್ನು ಪುಡಿ ಮಾಡಿ ಅದನ್ನು 1 ಗ್ಲಾಸ್ ನೀರಿಗೆ ಹಾಕಿ ಚೆನ್ನಾಗಿ 10 ನಿಮಿಷಗಳ ಕಾಲ ಕುದಿಸಿ. ಬಳಿಕ ಅದನ್ನು ಸೋಸಿ ತಣ್ಣಗಾದ ಮೇಲೆ ಅದಕ್ಕೆ ಜೇನುತುಪ್ಪ ಮಿಕ್ಸ್ ಮಾಡಿ ಒಂದೊಂದೆ ಸಿಪ್ ಕುಡಿಯಿರಿ. ಇದರಿಂದ ನಿಮಗೆ ಅಜೀರ್ಣ ಸಮಸ್ಯೆಯಾಗಿದ್ದರೆ ಆಹಾರ ಸರಿಯಾಗಿ ಜೀರ್ಣವಾಗಿ ಹೊಟ್ಟೆ ನೋವು ನಿವಾರಣೆಯಾಗುತ್ತದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ನೀವು ಪ್ರತಿದಿನ ಊಟ ಆದ ಬಳಿಕ ಈ ಸೊಂಪಿನ ಕಷಾಯ ಸೇವಿಸಿ. ಇದರಿಂದ ನಿಮಗೆ ಅಜೀರ್ಣ ಸಮಸ್ಯೆ ಕಾಡುವುದಿಲ್ಲ. ಹೊಟ್ಟೆ ನೋವು, ಗ್ಯಾಸ್ಟ್ರಿಕ್ ಸಮಸ್ಯೆ ಕಾಡುವುದಿಲ್ಲ.

For Latest News Updates, Join Our Whatsapp Community🚩
RELATED ARTICLES

Most Popular