HomeIndiaಹೋಳಿ ಹಬ್ಬದಲ್ಲಿ ಪೊಲೀಸ್ ಡ್ಯಾನ್ಸ್; ತೇಜ್ ಪ್ರತಾಪ್ ಯಾದವ್ ಮಾತಿಗೆ ಮಣಿದ ಪೇದೆ ಈಗ ಸಸ್ಪೆಂಡ್.....!

ಹೋಳಿ ಹಬ್ಬದಲ್ಲಿ ಪೊಲೀಸ್ ಡ್ಯಾನ್ಸ್; ತೇಜ್ ಪ್ರತಾಪ್ ಯಾದವ್ ಮಾತಿಗೆ ಮಣಿದ ಪೇದೆ ಈಗ ಸಸ್ಪೆಂಡ್…..!

ಆರ್‌ಜೆಡಿ ಶಾಸಕ ತೇಜ್ ಪ್ರತಾಪ್ ಯಾದವ್ ನಿನ್ನೆ ಒಂದು ವಿವಾದ ಸೃಷ್ಟಿಸಿದ್ದಾರೆ. ತಮ್ಮ ಮನೆಯಲ್ಲಿ ಹೋಳಿ ಆಚರಿಸುವಾಗ ಪೊಲೀಸರಿಗೆ ಡ್ಯಾನ್ಸ್ ಮಾಡೋಕೆ ಹೇಳಿದ್ದಾರೆ. ಅದಕ್ಕೆ ಪೊಲೀಸ್ ಪೇದೆ ದೀಪಕ್ ಕುಮಾರ್ ಡ್ಯಾನ್ಸ್ ಮಾಡಿದ್ದಾರೆ. ಆದ್ರೆ, ಈ ವಿಡಿಯೋ ವೈರಲ್ ಆಗ್ತಿದ್ದಂತೆ ದೀಪಕ್ ಕುಮಾರ್‌ನನ್ನ ಸಸ್ಪೆಂಡ್ ಮಾಡಿದ್ದಾರೆ.

ತೇಜ್ ಪ್ರತಾಪ್ ಯಾದವ್ ಪೊಲೀಸರಿಗೆ ಡ್ಯಾನ್ಸ್ ಮಾಡೋಕೆ ಹೇಳುವಾಗ, “ಹಾಡು ಪ್ಲೇ ಆಗುತ್ತದೆ, ನೀವು ನೃತ್ಯ ಮಾಡಬೇಕು. ಮನಸ್ಸಿಗೆ ತೆಗೆದುಕೊಳ್ಳಬೇಡಿ, ಇದು ಹೋಳಿ. ನೃತ್ಯ ಮಾಡಿ, ಇಲ್ಲದಿದ್ದರೆ ನಿಮ್ಮನ್ನು ಅಮಾನತುಗೊಳಿಸಲಾಗುತ್ತದೆ” ಅಂತ ಹೇಳಿದ್ದಾರೆ.

ಈ ಘಟನೆಗೆ ಜೆಡಿಯು ಮತ್ತು ಬಿಜೆಪಿ ನಾಯಕರು ತೀವ್ರವಾಗಿ ವಿರೋಧ ವ್ಯಕ್ತಪಡಿಸಿದ್ದಾರೆ. ಜೆಡಿಯು ರಾಷ್ಟ್ರೀಯ ವಕ್ತಾರ ರಾಜೀವ್ ರಂಜನ್ ಪ್ರಸಾದ್, “ಲಾಲೂ ಯಾದವ್ ಅವರ ರಾಜಕುಮಾರ ಪೊಲೀಸರಿಗೆ ನೃತ್ಯ ಮಾಡಲು ಸೂಚನೆ ನೀಡುತ್ತಿದ್ದಾರೆ. ಬಿಹಾರ ಈಗ ಬದಲಾಗಿದೆ. ಇಂತಹ ಕೃತ್ಯಗಳಿಗೆ ಈ ಬದಲಾಗುತ್ತಿರುವ ಬಿಹಾರದ ವಾತಾವರಣದಲ್ಲಿ ಸ್ಥಾನವಿಲ್ಲ” ಅಂತ ಹೇಳಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಬಿಜೆಪಿ ವಕ್ತಾರ ಶಹ್ಜಾದ್ ಪೂನಾವಾಲಾ, “ಆರ್‌ಜೆಡಿ ಜಂಗಲ್ ರಾಜ್‌ನಲ್ಲಿ ನಂಬಿಕೆ ಹೊಂದಿದೆ ಎಂಬುದಕ್ಕೆ ಇದು ಸಾಕ್ಷಿ” ಅಂತ ಟೀಕಿಸಿದ್ದಾರೆ.

ಈ ಘಟನೆ ಬಿಹಾರದ ರಾಜಕೀಯದಲ್ಲಿ ದೊಡ್ಡ ಚರ್ಚೆಯನ್ನ ಹುಟ್ಟುಹಾಕಿದೆ.

For Latest News Updates, Join Our Whatsapp Community🚩
RELATED ARTICLES

Most Popular