ದಶಕಗಳಿಂದ ‘ಗ್ಯಾರಂಟಿ’ ಹೆಸರಲ್ಲಿ ಬಡವರಿಗೆ ವಂಚನೆ: ‘ಗರೀಬಿ ಹಠಾವೋ’ ದೊಡ್ಡ ಸುಳ್ಳು; ಕಾಂಗ್ರೆಸ್ ವಿರುದ್ಧ ಮೋದಿ ವಾಗ್ದಾಳಿ

ಅಜ್ಮೀರ್: ಗ್ಯಾರಂಟಿ ಯೋಜನೆಗಳ ಹೆಸರಲ್ಲಿ ಕಾಂಗ್ರೆಸ್ ಬಡವರನ್ನು ವಂಚಿಸುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಟೀಕಿಸಿದ್ದಾರೆ.

ರಾಜಸ್ಥಾನದ ಅಜ್ಮೀರ್ ನಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಜನರಿಗೆ ನೀಡುತ್ತಿರುವ ಗ್ಯಾರಂಟಿ ಯೋಜನೆಗಳು ಹೊಸದೇನಲ್ಲ. ದಶಕಗಳಷ್ಟು ಹಳೆಯವು. 50 ವರ್ಷಗಳ ಹಿಂದೆಯೇ ಗರೀಬಿ ಹಠಾವೋ ಎಂದು ಕಾಂಗ್ರೆಸ್ ನವರು ಹೇಳಿದ್ದರು. ಆದರೆ ಅದು ಆಗಲೇ ಇಲ್ಲ ಎಂದು ದೂರಿದ್ದಾರೆ.

ಬಡವರನ್ನು ವಂಚಿಸುವುದೇ ಕಾಂಗ್ರೆಸ್ ಪಕ್ಷದ ಕುತಂತ್ರವಾಗಿದೆ. ಗ್ಯಾರಂಟಿ ನಂಬಿಕೊಂಡು ರಾಜಸ್ಥಾನದ ಜನ ಸಂಕಷ್ಟಕ್ಕೆ ಸಿಲುಕಿದ್ದಾರೆ ಪ್ರಧಾನಿ ಮೋದಿ ಹೇಳಿದ್ದಾರೆ.

ಕಾಂಗ್ರೆಸ್‌ನ ‘ಗ್ಯಾರೆಂಟಿ ಪದ್ಧತಿ’ ಹೊಸದಲ್ಲ, 50 ವರ್ಷಗಳ ಹಿಂದೆ ಗರೀಬಿ ಹಠಾವೋ ಕಾಂಗ್ರೆಸ್ ಬಡತನವನ್ನು ತೊಡೆದುಹಾಕುವ ಭರವಸೆ ನೀಡಿತು, ಅದು ದೊಡ್ಡ ಸುಳ್ಳು, ಬಡವರನ್ನು ಮೋಸ ಮಾಡುವುದು ಕಾಂಗ್ರೆಸ್‌ನ ತಂತ್ರವಾಗಿದೆ. ಇದರಿಂದ ರಾಜಸ್ಥಾನ ಸಂಕಷ್ಟಕ್ಕೆ ಸಿಲುಕಿದೆ ಎಂದರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read