I.N.D.I.A ಬಣದ ನಾಯಕತ್ವ ಕಸಿಯಲು ಕಾಂಗ್ರೆಸ್ ಪಿತೂರಿ, ಪ್ರಧಾನಿಯಾಗಿ ಖರ್ಗೆ ಬಿಂಬಿಸಲು ಸಂಚು: ನಿರ್ಗಮನದ ನಂತರ ಜೆಡಿಯು ಆರೋಪ

ನವದೆಹಲಿ: ಜನತಾದಳ(ಯುನೈಟೆಡ್) ಎನ್‌ಡಿಎಗೆ ಮರುಸೇರ್ಪಡೆಗೊಳ್ಳಲು ಪ್ರತಿಪಕ್ಷಗಳ ಮಹಾಮೈತ್ರಿಕೂಟ ತೊರೆದ ಕೂಡಲೇ ಪಕ್ಷದ ನಾಯಕ ಕೆ.ಸಿ. ತ್ಯಾಗಿ ಕಾಂಗ್ರೆಸ್‌ ಮೇಲೆ ಹರಿಹಾಯ್ದಿದ್ದು, ಕಾಂಗ್ರೆಸ್ ಐಎನ್‌ಡಿಐಎ ಬಣದ ನಾಯಕತ್ವವನ್ನು ಕದಿಯಲು ಪಿತೂರಿ ನಡೆಸಿದೆ ಎಂದು ಆರೋಪಿಸಿದ್ದಾರೆ.

ಕಾಂಗ್ರೆಸ್ ತನ್ನ ತುರ್ತು ಸಲಹೆಗಳನ್ನು ಬದಿಗೊತ್ತಿ ಸೀಟು ಹಂಚಿಕೆ ಮಾತುಕತೆಯನ್ನು ಎಳೆದುಕೊಂಡು ಹೋಗುತ್ತಿದೆ ಎಂದು ತ್ಯಾಗಿ ಹೇಳಿದ್ದಾರೆ.

ನಿತೀಶ್ ಕುಮಾರ್ ಬಿಹಾರದ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ, ಮಹಾಘಟಬಂಧನ್ ಮತ್ತು I.N.D.I.A ಬ್ಲಾಕ್‌ನೊಂದಿಗಿನ ಅವರ ಒಂದು ವರ್ಷದ ಸಂಬಂಧವನ್ನು ಕೊನೆಗೊಳಿಸಿದ ನಂತರ ಈ ಹೇಳಿಕೆ ಬಂದಿದೆ.

ಮುಂಬೈನಲ್ಲಿ ನಡೆದ ಜಂಟಿ ಪ್ರತಿಪಕ್ಷಗಳ ಸಭೆಯಲ್ಲಿ ಪ್ರಧಾನಿ ಪಟ್ಟವಿಲ್ಲದೆ ಲೋಕಸಭೆ ಚುನಾವಣೆ ಎದುರಿಸಬೇಕೆಂದು ಮೊದಲು ನಿರ್ಧರಿಸಲಾಗಿತ್ತು. ಆದರೆ, ಡಿಸೆಂಬರ್ 19 ರಂದು ದೆಹಲಿಯಲ್ಲಿ ನಡೆದ ಸಭೆಯಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಹೆಸರನ್ನು ಪಿತೂರಿ ಮೂಲಕ ಬಿಂಬಿಸಲಾಗಿದೆ ಎಂದು ಆರೋಪಿಸಲಾಗಿದೆ.

ಕಾಂಗ್ರೆಸ್ ‘ಇಂಡಿಯಾ’ ಮೈತ್ರಿಕೂಟದ ನಾಯಕತ್ವ ಕದಿಯಲು ಬಯಸಿತ್ತು. ಡಿಸೆಂಬರ್ 19 ರಂದು ನಡೆದ ಸಭೆಯಲ್ಲಿ ಮೈತ್ರಿಕೂಟದ ನಾಯಕತ್ವ ಪಡೆಯಲು ಪ್ರಧಾನಿ ಹುದ್ದೆಗೆ ಮಲ್ಲಿಕಾರ್ಜುನ ಖರ್ಗೆ ಅವರ ಹೆಸರನ್ನು ಪ್ರಸ್ತಾಪಿಸಲಾಯಿತು. ಈ ಹಿಂದೆ ಮುಂಬೈನಲ್ಲಿ ನಡೆದ ಸಭೆಯಲ್ಲಿ ಯಾವುದೇ ಪ್ರಧಾನಿ ಮುಖ ಇಲ್ಲದೆ ಚುನಾವಣೆ ಎದುರಿಸಲು ಸರ್ವಾನುಮತದಿಂದ ನಿರ್ಧರಿಸಲಾಯಿತು. ಪ್ರಧಾನಿ ಮುಖವಾಗಿ ಖರ್ಗೆ ಅವರ ಹೆಸರನ್ನು ಮಮತಾ ಬ್ಯಾನರ್ಜಿ ಪ್ರಸ್ತಾಪಿಸಲು ಪಿತೂರಿ ನಡೆಸಲಾಗಿದೆ ಎಂದು ತ್ಯಾಗಿ ಆರೋಪಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read