ಮೋದಿ ಉಪನಾಮದ ಪ್ರಕರಣದಲ್ಲಿ ರಾಹುಲ್ ಗಾಂಧಿಗೆ ಗುಜರಾತ್‌ನ ಸೂರತ್ ನ್ಯಾಯಾಲಯ ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಿದ ಬಳಿಕ, ಇದೀಗ ತಾವು ಪ್ರಧಾನ ಮಂತ್ರಿ ನರೇಂದ್ರ ಮೋದಿ ವಿರುದ್ಧ ಮಾನನಷ್ಟ ಪ್ರಕರಣ ಹೂಡುವುದಾಗಿ ಕಾಂಗ್ರೆಸ್ ನಾಯಕಿ ರೇಣುಕಾ ಚೌಧರಿ ತಿಳಿಸಿದ್ದಾರೆ.
2018ರಲ್ಲಿ ಸಂಸತ್ತಿನಲ್ಲಿ ಪ್ರಧಾನಿ ಮೋದಿ ’ಶೂರ್ಪನಕಿ’ ಎಂದಿದ್ದ ವಿಚಾರವಾಗಿ ಈ ಮಾತುಗಳನ್ನು ಹೇಳಿರುವ ರೇಣುಕಾ ಚೌಧರಿ, “ಕೋರ್ಟ್‌ಗಳು ಅದೆಷ್ಟು ತ್ವರಿತವಾಗಿ ಕೆಲಸ ಮಾಡುತ್ತವೆ ಎಂದು ಈಗ ನೋಡೋಣ,” ಎಂದಿದ್ದಾರೆ.
ಇದೇ ವಿಚಾರವಾಗಿ ಟ್ವೀಟ್ ಮಾಡಿರುವ ರೇಣುಕಾ ಚೌಧರಿ, ಪ್ರಧಾನಿ ಮೋದಿ ತಮ್ಮನ್ನು ಶೂರ್ಪನಕಿಗೆ ಹೋಲಿಸಿದ್ದಾರೆ ಎನ್ನಲಾದ ಘಟನೆಯೊಂದರ ವಿಡಿಯೋವನ್ನು ಶೇರ್ ಮಾಡಿದ್ದು, “ಈ ಅಧಿಕಾರದಾಹಿ ವ್ಯಕ್ತಿ ನನ್ನನ್ನು ಸದನದಲ್ಲಿ ಶೂರ್ಪನಕಿ ಎಂದು ಕರೆದಿದ್ದಾರೆ. ನಾನು ಅವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುತ್ತೇನೆ. ನೋಡೋಣ ಅದೆಷ್ಟು ಬೇಗ ಕೋರ್ಟ್‌ಗಳು ಈಗ ಕೆಲಸ ಮಾಡುತ್ತವೆ” ಎಂದು ಹೇಳಿದ್ದಾರೆ.
ಪ್ರಧಾನ ಮಂತ್ರಿ ನರೇಂದ್ರ ಮೋದಿರ ಉಪನಾಮದ ವಿರುದ್ಧ ಅವಹೇಳನಾಕಾರಿಯಾಗಿ ಮಾತನಾಡಿದ್ದ ಆರೋಪದ ಮೇಲೆ ರಾಹುಲ್ ಗಾಂಧಿರನ್ನು ತಪ್ಪಿತಸ್ಥ ಎಂದು ಘೋಷಿಸಿದ ಸೂರತ್ ನ್ಯಾಯಾಲಯ ಆತನಿಗೆ ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಪ್ರಧಾನಿ ಮೋದಿ ವಿರುದ್ಧ ಆಪಾದನೆ ಮಾಡುವ ಭರದಲ್ಲಿ, “ಏಕೆ ಎಲ್ಲ ಕಳ್ಳರೂ ಮೋದಿ ಉಪನಾಮ ಹೊಂದಿದ್ದಾರೆ,” ಎಂದು ಕೇಳುವ ಮೂಲಕ ಭಾರೀ ವಿವಾದ ಸೃಷ್ಟಿಸಿದ್ದರು. ಬಳಿಕ ರಾಹುಲ್ ಗಾಂಧಿಗೆ ಬೇಲ್ ನೀಡಲಾಗಿದ್ದು, ಮೇಲ್ಮನವಿ ಸಲ್ಲಿಸಲು 30 ದಿನಗಳ ಕಾಲಾವಕಾಶ ನೀಡಲಾಗಿದೆ.
https://twitter.com/RenukaCCongress/status/1638927867018092545?ref_src=twsrc%5Etfw%7Ctwcamp%5Etweetembed%7Ctwterm%5E1638927867018092545%7Ctwgr%5E790d783fa4a78275adf170679785b1ab658fdcd8%7Ctwcon%5Es1_&ref_url=https%3A%2F%2Fzeenews.india.com%2Findia%2Fcongress-leader-renuka-chowdhury-to-file-defamation-case-against-pm-narendra-modi-over-surpanakha-jibe-says-lets-see-how-fast-courts-act-now-2587283.html