HomeKarnatakaಭಾವುಕ ಪೋಸ್ಟ್: ಶಿಡ್ಲಘಟ್ಟ ಜನರಿಗೆ ಧನ್ಯವಾದ ಸಲ್ಲಿಸಿದ ರಾಜೀವ್ ಗೌಡ

ಭಾವುಕ ಪೋಸ್ಟ್: ಶಿಡ್ಲಘಟ್ಟ ಜನರಿಗೆ ಧನ್ಯವಾದ ಸಲ್ಲಿಸಿದ ರಾಜೀವ್ ಗೌಡ

ಶಿಡ್ಲಘಟ್ಟ ನಗರಸಭೆ ಪೌರಾಯುಕ್ತೆಗೆ ದೂರವಾಣಿ ಕರೆ ಮೂಲಕ ಬೆದರಿಕೆ ಹಾಕಿದ್ದ ಪ್ರಕರಣದ ಆರೋಪಿ ರಾಜೀವ್ ಗೌಡ. 12 ದಿನಗಳ ಕಾಲ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದು, ಸದ್ಯ ರಾಜೀವ್ ಗೌಡ ಪೊಲೀಸರ ವಶದಲ್ಲಿದ್ದಾರೆ.

ಧಮ್ಕಿ ಹಾಕಿದ ಪ್ರಕರಣದ ಸಂಬಂಧ ದಾಖಲಾಗಿರುವ 2 ಎಫ್‌ಐಆರ್ ಆಧಾರದ ಮೇಲೆ ಬಂಧನಕ್ಕೆ ಒಳಗಾಗಿರುವ ಕಾಂಗ್ರೆಸ್ ಮುಖಂಡ ರಾಜೀವ್ ಗೌಡ ಶಿಡ್ಲಘಟ್ಟ ಜನರಿಗಾಗಿ ಭಾವುಕ ಪೋಸ್ಟ್ ಒಂದನ್ನು ಹಾಕಿದ್ದಾರೆ.

ಧಮ್ಕಿ ಹಾಕಿದ ಪ್ರಕರಣದಲ್ಲಿ ರಾಜ್ಯಾದ್ಯಂತ ಸುದ್ದಿ ಮಾಡಿ, ಕಾಂಗ್ರೆಸ್ ನಾಯಕರಿಗೆ ಮುಜುಗರ ಉಂಟು ಮಾಡಿ ಕಾಂಗ್ರೆಸ್ ಪಕ್ಷದಿಂದ ರಾಜೀವ್ ಗೌಡ ಅಮಾನತುಗೊಂಡಿದ್ದಾರೆ. ಇಂತಹ ಸಂಕಷ್ಟದ ಪರಿಸ್ಥಿತಿಯಲ್ಲಿ ಅವರು ಶಿಡ್ಲಘಟ್ಟದ ಜನರನ್ನು ನೆನಪಿಸಿಕೊಂಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ರಾಜೀವ್ ಗೌಡ ಪೋಸ್ಟ್: ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿರುವ ರಾಜೀವ್ ಗೌಡ, ‘ಇರಲಿ ಕಷ್ಟ ಸುಖ ನೋವು ಇದ್ದದ್ದೇ, ತಾಳ್ಮೆ ಕಳೆದುಕೊಳ್ಳಬಾರದು. ತಪ್ಪಾಗಿದೆ ಕ್ಷಮೆ ಇರಲಿ, ಆದರೆ ಜನರ ಬದುಕಿಗೆ ನೋವು ತರುವುದಿಲ್ಲ ಎಂದು ತಮ್ಮಲ್ಲಿ ವಿನಮ್ರತೆಯಿಂದ ಮನವಿ ಮಾಡಿದ್ದೇನೆ’ ಎಂದು ಹೇಳಿದ್ದಾರೆ.

‘ಆತ್ಮೀಯ ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದ ನನ್ನೆಲ್ಲ ಬಂಧು ಮಿತ್ರರೇ ಹಾಗೂ ನನ್ನ ಹೃದಯಅಂತರಾಳದ ಕಾರ್ಯಕರ್ತರೇ ಹಾಗೂ ಮುಖಂಡರೆ ನನ್ನ ರಾಜಕೀಯದಲ್ಲಿ ನೋಡಿದಂತೆ ಎಲ್ಲಾ ಕಷ್ಟ ಸುಖಗಳಲ್ಲಿ ಭಾಗಿಯಾದ ತಾವು ಇಂದು ಹಾಗೂ ಪ್ರತಿ ಕ್ಷಣದಲ್ಲೂ ನನಗೆ ಬೆನ್ನೆಲುಬಾಗಿ ನಿಂತು ನನಗೆ ಬೆಂಬಲ ತೋರಿಸಿ ನನಗೆ ಆತ್ಮಸ್ಥೈರ್ಯ ತುಂಬಿದ ತಮಗೆ ನನ್ನ ಜೀವನದ ಕೊನೆ ಕ್ಷಣದವರೆಗೂ ನನ್ನ ಪಾದಾಬಿವಂದನೆಗಳು’ ಎಂದು ತಿಳಿಸಿದ್ದಾರೆ.

‘ನನ್ನೊಂದಿಗೆ ಇದ್ದ ನಿಮ್ಮ ಕ್ಷಣಗಳು, ನಿಮ್ಮ ಋಣ ಜೀವನದಲ್ಲಿ ಎಂದು ಮರೆಯಲಾರದ ಆಭಾರಿ. ತುಂಬು ಹೃದಯದ ಧನ್ಯವಾದಗಳು ತಮ್ಮೆಲ್ಲರಿಗೂ’ ಎಂದು ಪೋಸ್ಟ್ ಹಾಕಿದ್ದಾರೆ. ಶಿಡ್ಲಘಟ್ಟ ವಿ.ಕ್ಷೇತ್ರವೇ ನನ್ನ ಕರ್ಮ ಭೂಮಿ. ಜನ್ಮ ತಾಯಿ ಕೊಟ್ಟರೆ ರಾಜಕೀಯ ಜೀವನ ಶಿಡ್ಲಘಟ್ಟ ಜನತೆ ನೀಡಿದೆ ಎಂದು ಭಾವುಕರಾಗಿದ್ದಾರೆ.

ಚುನಾವಣೆಯಲ್ಲಿ ಸೋಲು: ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ಕ್ಷೇತ್ರ ಬಂಡಾಯ ಅಭ್ಯರ್ಥಿಗಳು ಮತ್ತು ಟಿಕೆಟ್‌ ನಡುವಿನ ಗೊಂದಲದ ಕಾರಣಕ್ಕೆ 2018ರ ವಿಧಾನಸಭೆ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಗಮನ ಸೆಳೆದಿತ್ತು. 2023ರಲ್ಲಿಯೂ ಅದೇ ಆಗಿತ್ತು.

ಶಿಡ್ಲಘಟ್ಟದಲ್ಲಿ ಕಾಂಗ್ರೆಸ್ ಮುಖಂಡರು ರಾಜೀವ್‌ ಗೌಡ ಅವರ ಅವಾಚ್ಯ ಹೇಳಿಕೆಗಳಿಂದ ಕ್ಷೇತ್ರದ ಶಾಂತಿ ಭಂಗವಾಗುತ್ತಿದೆ ಎಂದು ಆರೋಪ ಮಾಡುತ್ತಿದ್ದಾರೆ. ಅವರನ್ನು ಕ್ಷೇತ್ರದಿಂದ ಹೊರ ಹಾಕಬೇಕು ಎಂದು ಬೇಡಿಕೆ ಇಟ್ಟಿದ್ದಾರೆ.

2023ರ ಚುನಾವಣೆಯಲ್ಲಿ ಶಿಡ್ಲಘಟ್ಟದಲ್ಲಿ ಕಾಂಗ್ರೆಸ್ ಟಿಕೆಟ್‌ಗಾಗಿ ಭಾರೀ ಪೈಪೋಟಿ ಇತ್ತು. ಅಂತಿಮವಾಗಿ ರಾಜೀವ್ ಗೌಡ ಟಿಕೆಟ್ ಪಡೆದರು. 36,157 ಮತಗಳನ್ನು ಪಡೆಯುವ ಮೂಲಕ ಚುನಾವಣೆಯಲ್ಲಿ 3ನೇ ಸ್ಥಾನಗಳಿಸಿದರು.

ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ಪುಟ್ಟು ಅಂಜಿನಪ್ಪ ಕಾಂಗ್ರೆಸ್ ಟಿಕೆಟ್ ಕೈತಪ್ಪಿದ ಕಾರಣಕ್ಕೆ ಬಂಡಾಯದ ಬಾವುಟ ಹಾರಿಸಿದರು. ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದು 52,160 ಮತಗಳನ್ನು ಪಡೆದು 2ನೇ ಸ್ಥಾನಕ್ಕರ ತೃಪ್ತಿಪಟ್ಟುಕೊಂಡರು. ಕ್ಷೇತ್ರದ ಹಾಲಿ ಶಾಸಕರು ಜೆಡಿಎಸ್‌ನ ಬಿ.ಎನ್.ರವಿಕುಮಾರ್.

ವಿ.ಮುನಿಯಪ್ಪ, ಪುಟ್ಟು ಆಂಜಿನಪ್ಪ, ರಾಜೀವ್ ಗೌಡ ಎಂದು ಶಿಡ್ಲಘಟ್ಟ ಕಾಂಗ್ರೆಸ್ ಕಾರ್ಯಕರ್ತರು ಮೂರು ಬಣವಾಗಿ ಹೋಗಿದ್ದಾರೆ. ಸಮಾಜ ಸೇವಕರಾಗಿದ್ದ ರಾಜೀವ್ ಗೌಡ ಕೆ.ಎಚ್.ಮುನಿಯಪ್ಪ ಮೂಲಕ ಟಿಕೆಟ್ ಪಡೆದು ಚುನಾವಣೆಯಲ್ಲಿ ಸೋಲು ಕಂಡಿದ್ದರು.

ಈಗ ನಗರಸಭೆ ಆಯುಕ್ತರಿಗೆ ಧಮ್ಕಿ ಹಾಕಿದ ಪ್ರಕರಣದಲ್ಲಿ ರಾಜ್ಯಾದ್ಯಂತ ಸುದ್ದಿ ಮಾಡಿದ್ದಾರೆ. ಕಾಂಗ್ರೆಸ್ ಪಕ್ಷದಿಂದ ಅಮಾನತುಗೊಂಡಿದ್ದಾರೆ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

Most Popular