HomeIndiaBIG NEWS: ಮಾಜಿ ಶಾಸಕ ವಿವೇಕ್ ಧಾಕಡ್ ಆತ್ಮಹತ್ಯೆ

BIG NEWS: ಮಾಜಿ ಶಾಸಕ ವಿವೇಕ್ ಧಾಕಡ್ ಆತ್ಮಹತ್ಯೆ

ಜೈಪುರ: ಕಾಂಗ್ರೆಸ್ ಮಾಜಿ ಶಾಸಕ ವಿವೇಕ್ ಧಾಕಡ್ ತಮ್ಮ ನಿವಾಸದಲ್ಲಿಯೇ ಆತ್ಮಹತ್ಯೆಗೆ ಶರಣಾಗಿರುವ ಘಟನೆ ರಾಜಸ್ಥಾನದಲ್ಲಿ ನಡೆದಿದೆ.

ರಾಜಸ್ಥಾನದ ಮಂಡಲಘಡ ಕ್ಷೇತ್ರದ ಮಾಜಿ ಶಾಸಕರಾಗಿದ್ದ ವಿವೇಕ್ ಧಾಕಡ್ ಸುಭಾಷ್ ನಗರದಲ್ಲಿರುವ ನಿವಾಸದಲ್ಲಿ ತಮ್ಮ ಕೋಣೆಯಲ್ಲಿ ಕೈ ನರ ಕಟ್ ಮಾಡಿಕೊಂಡು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದರು. ವಿಷಯ ತಿಳಿಯುತ್ತಿದ್ದಂತೆ ಕುಟುಂಬ ಸದಸ್ಯರು ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ವಿವೇಕ್ ಧಾಕಡ್ ಕೊನೆಯುಸಿರೆಳೆದಿದ್ದಾರೆ.

ವಿವೇಕ್ ಧಾಕಡ್ ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬದಿಲ್ಲ. ಇದೇ ವೇಳೆ ವಿವೇಕ್ ಅವರ ತಂದೆ ಕೂಡ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು, ಅವರ ಸ್ಥಿತಿ ಕೂಡ ಗಂಭೀರವಾಗಿದೆ ಎಂದು ತಿಳಿದುಬಂದಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಘಟನಾ ಸ್ಥಳಕ್ಕೆ ಆಗಮಿಸಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular