ನವದೆಹಲಿ: ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಬುಧವಾರ ‘ಘರ್ ಘರ್ ಗ್ಯಾರಂಟಿ’ ಯೋಜನೆಗೆ ಚಾಲನೆ ನೀಡಿದರು. ಕರ್ನಾಟಕದಲ್ಲಿ ಪಂಚ ಗ್ಯಾರಂಟಿ ಯೋಜನೆಗಳು ಯಶಸ್ವಿಯಾಗಿ ಜಾರಿಯಾದ ಹಿನ್ನೆಲೆ ರಾಷ್ಟ್ರಮಟ್ಟದಲ್ಲಿ ಕಾಂಗ್ರೆಸ್ ಮತ್ತೆ ಹಲವು ಗ್ಯಾರಂಟಿ ಯೋಜನೆಗಳನ್ನು ಘೋಷಿಸಿದೆ.
“ನಮ್ಮ “ಪಂಚ ನ್ಯಾಯ್ ಪಚೀಸ್ ಗ್ಯಾರಂಟಿ” ಅನ್ನು ಜನರಿಗೆ ತಲುಪಿಸಲು ನಾವು ಈ ಖಾತರಿ ಕಾರ್ಡ್ ಅನ್ನು ವಿತರಿಸುತ್ತಿದ್ದೇವೆ. ಎಲ್ಲಾ ಕಾಂಗ್ರೆಸ್ ನಾಯಕರು ಮತ್ತು ಕಾರ್ಯಕರ್ತರು ಈ ಕಾರ್ಡ್ ಅನ್ನು ದೇಶಾದ್ಯಂತ ಮನೆಗಳಿಗೆ ಕೊಂಡೊಯ್ಯುತ್ತಾರೆ ಮತ್ತು ನಮ್ಮ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬಂದಾಗ ಏನು ಮಾಡುತ್ತದೆ ಎಂದು ಜನರಿಗೆ ತಿಳಿಸುತ್ತಾರೆ ” ಎಂದು ಖರ್ಗೆ ಹೇಳಿದರು.
ಇಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ದೆಹಲಿಯ ಕಾತಿಯಾವಾಡದ ಉಸ್ಮಾನ್ಪುರ್ನಲ್ಲಿ ನಡೆದ ಕಾರ್ಯಕ್ರಮದಲ್ಲಿ ‘ಘರ್ ಘರ್ ಗ್ಯಾರಂಟಿ’ ಯೋಜನೆ ಅನಾವರಣಗೊಳಿಸಿದ್ದಾರೆ
ಕಾಂಗ್ರೆಸ್ ಐದು ನ್ಯಾಯಗಳು
1. ಯುವ ನ್ಯಾಯ
2. ನಾರಿ ನ್ಯಾಯ
3. ಕಿಸಾನ್ ನ್ಯಾಯ
4. ಶ್ರಮಿಕ್ ನ್ಯಾಯ
5. ಸಮಾನತೆ ನ್ಯಾಯ
https://twitter.com/INCIndia/status/1775443105027588342?ref_src=twsrc%5Etfw%7Ctwcamp%5Etweetembed%7Ctwterm%5E1775443105027588342%7Ctwgr%5Eb9f924c5905ef032567afa02553039bbeae0218d%7Ctwcon%5Es1_&ref_url=https%3A%2F%2Ftv9kannada.com%2Felections%2Flok-sabha-elections%2Fcongress-releases-5-justice-25-guarantees-here-is-the-list-in-kannada-snvs-810812.html