HomeIndiaಕಾಂಗ್ರೆಸ್ ಕರ ಪತ್ರದಲ್ಲಿ ನಕಲಿ ಕ್ಯೂಆರ್ ಕೋಡ್: ಜನರ ದೇಣಿಗೆ ಯಾವುದೋ ಖಾತೆಗೆ ಜಮಾ

ಕಾಂಗ್ರೆಸ್ ಕರ ಪತ್ರದಲ್ಲಿ ನಕಲಿ ಕ್ಯೂಆರ್ ಕೋಡ್: ಜನರ ದೇಣಿಗೆ ಯಾವುದೋ ಖಾತೆಗೆ ಜಮಾ

ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೈಗೊಂಡಿರುವ ಭಾರತ್ ಜೋಡೋ ನ್ಯಾಯ ಯಾತ್ರೆ ಅಂಗವಾಗಿ ದೇಶಕ್ಕಾಗಿ ದೇಣಿಗೆ ಅಭಿಯಾನ ಮೂಲಕ ಹಣ ಸಂಗ್ರಹಿಸಲಾಗಿದೆ.

ಅಭಿಯಾನದ ವೆಬ್ ಸೈಟ್ ಕ್ಯೂಆರ್ ಕೋಡ್ ತಪ್ಪಾಗಿದ್ದ ಕಾರಣ ಲಕ್ಷಾಂತರ ರೂಪಾಯಿ ನಷ್ಟವಾಗಿರುವುದು ಬೆಳಕಿಗೆ ಬಂದಿದೆ. ಕಾಂಗ್ರೆಸ್ ಪಕ್ಷ ಮುದ್ರಿಸಿದ್ದ ಕರಪತ್ರದಲ್ಲಿ ವೆಬ್ಸೈಟ್ ವಿಳಾಸ ಮತ್ತು ಕ್ಯೂಆರ್ ಕೋಡ್ ನ ನಕಲಿಯಾಗಿದ್ದರಿಂದ ಜನರ ತೆರಿಗೆ ಹಣ ಯಾವುದೋ ನಕಲಿ ಖಾತೆಗೆ ಜಮೆಯಾಗಿದೆ ಎಂದು ಕಾಂಗ್ರೆಸ್ ಸಂವಹನ ವಿಭಾಗದ ಪ್ರಧಾನ ಕಾರ್ಯದರ್ಶಿ ಜೈರಾಂ ರಮೇಶ್, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಬಹಿರಂಗಪಡಿಸಿದ್ದಾರೆ.

ಕರಪತ್ರದಲ್ಲಿ ತಪ್ಪು ವೆಬ್ಸೈಟ್ ಅನ್ನು ಲಿಂಕ್ ಮಾಡಲಾಗಿತ್ತು. ಇದರಿಂದ ದೇಣಿಗೆ ಹಣ ನಕಲಿ ಖಾತೆಗೆ ಜಮೆಯಾಗಿದೆ ಎಂದು ಹೇಳಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕರಪತ್ರದಲ್ಲಿ, ಕ್ಯೂಆರ್ ಕೋಡ್ ಮತ್ತು ‘ಡೊನೇಟ್ ಫಾರ್ ದೇಶ್’ ವೆಬ್‌ಸೈಟ್‌ನ ಯುಆರ್‌ಎಲ್ ಅನ್ನು ಸಹ ಉಲ್ಲೇಖಿಸಲಾಗಿದೆ, ಎರಡೂ ತಪ್ಪಾಗಿದೆ. ಅಧಿಕೃತ ‘ಡೊನೇಟ್ ಫಾರ್ ದೇಶ್’ ಅಭಿಯಾನದ URL donateinc.in ಆಗಿದೆ, ಆದರೆ ಕರಪತ್ರದಲ್ಲಿ donateinc.co.in ಅನ್ನು ಮುದ್ರಿಸಲಾಗಿದೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular