BREAKING NEWS: ದೇಶವ್ಯಾಪಿ ‘ಸಂವಿಧಾನ ಬಚಾವೋ ರಾಷ್ಟ್ರೀಯ ಪಾದಯಾತ್ರೆ’ ಅಭಿಯಾನ: ಕಾಂಗ್ರೆಸ್ ಘೋಷಣೆ

ಬೆಳಗಾವಿ: ರಾಷ್ಟ್ರವ್ಯಾಪಿ ‘ಸಂವಿಧಾನ ಬಚಾವೋ ರಾಷ್ಟ್ರೀಯ ಪಾದಯಾತ್ರೆ’ ಅಭಿಯಾನ ಆರಂಭಿಸುವುದಾಗಿ ಕಾಂಗ್ರೆಸ್ ಘೋಷಣೆ ಮಾಡಿದೆ.

ನಗರದಲ್ಲಿ ನಡೆದ ಕಾಂಗ್ರೆಸ್ ಕಾರ್ಯಕಾರಿ ಸಮಿತಿ(ಸಿಡಬ್ಲ್ಯೂಸಿ) ಸಭೆಯ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ವಿವರ ನೀಡಿ, ಸಂವಿಧಾನ್ ಬಚಾವೋ ರಾಷ್ಟ್ರೀಯ ಪಾದಯಾತ್ರೆ’ ಎಂಬ ಸಾರ್ವಜನಿಕ ಪ್ರಚಾರ ಅಭಿಯಾನವನ್ನು ಹಳ್ಳಿಗಳಿಂದ ಪ್ರಾರಂಭಿಸಿ ರಾಷ್ಟ್ರದಾದ್ಯಂತ ಪಟ್ಟಣಗಳವರೆಗೆ ಪ್ರಾರಂಭಿಸುವುದಾಗಿ ತಿಳಿಸಿದ್ದಾರೆ.

ಪಕ್ಷವು ಎರಡು ಪ್ರಮುಖ ನಿರ್ಣಯಗಳನ್ನು ಅಂಗೀಕರಿಸಿದೆ ಎಂದು ಅವರು ತಿಳಿಸಿದ್ದು, ಮಹಾತ್ಮಾ ಗಾಂಧಿ ಬಗ್ಗೆ ಮತ್ತು ಇನ್ನೊಂದು ರಾಜಕೀಯ ನಿರ್ಣಯ ಕೈಗೊಳ್ಳಲಾಗಿದೆ. 2025 ರಲ್ಲಿ ಕಾಂಗ್ರೆಸ್ ನ ಸಾಂಸ್ಥಿಕ ಸುಧಾರಣಾ ಕಾರ್ಯಕ್ರಮದ ಮೇಲೆ ಕೇಂದ್ರೀಕರಿಸುವುದಾಗಿ ಹೇಳಿದ್ದಾರೆ,

ಪಕ್ಷದೊಳಗಿನ ಎಲ್ಲಾ ಹಂತದ ನಾಯಕರ ಸಾಮರ್ಥ್ಯಗಳ ಸಂಪೂರ್ಣ ಮೌಲ್ಯಮಾಪನವೂ ಇದರಲ್ಲಿ ಸೇರಿದೆ. ನಾವು ಎರಡು ನಿರ್ಣಯಗಳನ್ನು ಮಾಡಿದ್ದೇವೆ, ಒಂದು ಮಹಾತ್ಮಾ ಗಾಂಧಿ ಮತ್ತು ಎರಡನೆಯದು ರಾಜಕೀಯ ನಿರ್ಣಯವಾಗಿದೆ. 50 ಕ್ಕೂ ಹೆಚ್ಚು ನಾಯಕರು ಚರ್ಚೆಯಲ್ಲಿ ಭಾಗವಹಿಸಿದ್ದರು. ನಾವು ಅಂತಿಮವಾಗಿ ಒಂದು ವರ್ಷದವರೆಗೆ ಬೃಹತ್ ರಾಜಕೀಯ ಪ್ರಚಾರಕ್ಕೆ ಹೋಗಲು ನಿರ್ಧರಿಸಿದ್ದೇವೆ ಎಂದು ತಿಳಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read