ಪರಶುರಾಮನ ಮೂರ್ತಿ ಕಂಚಿನದ್ದು ಎಂದು 14 ಕೋಟಿಗೆ ಉಂಡೆ ನಾಮ ತಿಕ್ಕಿದೆ ಬಿಜೆಪಿ : ಕಾಂಗ್ರೆಸ್ ವಾಗ್ದಾಳಿ

ಬೆಂಗಳೂರು : ಪರಶುರಾಮನ ಮೂರ್ತಿ ಕಂಚಿನದ್ದು ಎಂದು ಹೇಳಿ ಸರ್ಕಾರದ 14 ಕೋಟಿಗೆ ಉಂಡೆ ನಾಮ ತಿಕ್ಕಿದೆ ಬಿಜೆಪಿ ಎಂದು ರಾಜ್ಯ ಕಾಂಗ್ರೆಸ್ ವಾಗ್ದಾಳಿ ನಡೆಸಿದೆ.

ಈ ಕುರಿತು ಟ್ವೀಟ್ ಮಾಡಿರುವ ಕಾಂಗ್ರೆಸ್, ಭ್ರಷ್ಟ ಜನತಾ ಪಾರ್ಟಿಯ ಹಿಂದುತ್ವ ಜಪದ ಹಿಂದಿರುವುದು ಭ್ರಷ್ಟಾಚಾರದ ಉದ್ದೇಶವೇ ಹೊರತು ಅಸಲಿ ದೈವಭಕ್ತಿಯಲ್ಲ. ಪರಶುರಾಮನ ಮೂರ್ತಿ ಕಂಚಿನದ್ದು ಎಂದು ಸರ್ಕಾರದ 14 ಕೋಟಿ ಹಣಕ್ಕೆ ಉಂಡೆ ನಾಮ ತಿಕ್ಕಿದೆ ಬಿಜೆಪಿ ಎಂದು ಕಿಡಿಕಾರಿದೆ

ಬಿಜೆಪಿಯ ನಕಲಿ ಹಿಂದುತ್ವದ ಅಸಲಿತನ ಬಯಲಾಗಿದೆ, ದೇವರು, ಪುರಾಣ ಪುರುಷರನ್ನೂ ಬಿಡದೆ ಲೂಟಿ ಹೊಡೆಯುವಷ್ಟು ಬಿಜೆಪಿ ಬರಗೆಟ್ಟಿದೆ. ಈಗ ಪರಶುರಾಮನ ಮೂರ್ತಿ “ಕಾಣೆಯಾಗಿದೆ” ಎನ್ನುವುದಿಲ್ಲವೇ BJP Karnataka ? ಬಿಜೆಪಿಯ ಈ ಮಹಾಮೋಸದ ಹಗರಣವನ್ನು ತನಿಖೆಗೆ ವಹಿಸಿ, ತಿಂದು ತೆಗಿದ ಜನರ ಹಣವನ್ನು ಹೊರಗೆ ಕಕ್ಕಿಸುವುದು ನಿಶ್ಚಿತ ಎಂದು ಹೇಳಿದೆ.

ಸತ್ಯ ಹರಿಶ್ಚಂದ್ರದ ವಂಶಸ್ಥನಂತೆ ಮಾತನಾಡುವ ಸುನಿಲ್ ಕುಮಾರ್ ಅವರೇ, ಫೈಬರ್ ಗೆ ಬಂಗಾರದ ಬಣ್ಣ ಬಳಿದು ಕಂಚು ಎಂದು ಇಡೀ ರಾಜ್ಯಕ್ಕೆ ಮಂಕುಬೂದಿ ಎರಚಿದ್ದೀರಿ, ಈಗ ನಿಮ್ಮ ಹಾಗೂ ನಿಮ್ಮ ಪ್ರತಿಮೆಯ ಬಣ್ಣ ಬಯಲಾಗಿದೆ. ಲೂಟಿ ಮಾಡಿ ತಿಂದಿದ್ದನ್ನು ಹೊರಗೆ ಕಕ್ಕಲು ಸಿದ್ದರಾಗಿರಿ ಎಂದಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read