HomeEntertainment‘ಬಿಗ್ ಬಾಸ್’ ಸ್ಪರ್ಧಿ, ಸ್ಯಾಂಡಲ್ ವುಡ್ ನಟಿ ದೀಪಿಕಾ ದಾಸ್ ಗೆ ಬೆದರಿಕೆ: ದೂರು ದಾಖಲು

‘ಬಿಗ್ ಬಾಸ್’ ಸ್ಪರ್ಧಿ, ಸ್ಯಾಂಡಲ್ ವುಡ್ ನಟಿ ದೀಪಿಕಾ ದಾಸ್ ಗೆ ಬೆದರಿಕೆ: ದೂರು ದಾಖಲು

ಬೆಂಗಳೂರು: ‘ಬಿಗ್ ಬಾಸ್’ ಸ್ಪರ್ಧಿ, ನಟಿ ದೀಪಿಕಾ ದಾಸ್ ಮತ್ತು ಅವರ ಪತಿಗೆ ಬೆದರಿಕೆ ಹಾಕಿದ್ದು, ಈ ಬಗ್ಗೆ ಬೆಂಗಳೂರಿನ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ದೀಪಿಕಾ ದಾಸ್ ಅವರ ತಾಯಿ ಪದ್ಮಲತಾ ಈ ಬಗ್ಗೆ ದೂರು ನೀಡಿದ್ದಾರೆ. ದೀಪಿಕಾ ದಾಸ್ ಇತ್ತೀಚೆಗೆ ದೀಪಕ್ ಕುಮಾರ್ ಎಂಬುವರೊಂದಿಗೆ ಮದುವೆಯಾಗಿದ್ದಾರೆ. ಯಶವಂತ್ ಎಂಬ ಯುವಕ ಅಳಿಯ ದೀಪಕ್ ಕುಮಾರ್ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾನೆ. ಹಣ ಕೊಡದಿದ್ದರೆ ನಿಮ್ಮ ಹೆಸರು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಬೆದರಿಕೆ ಹಾಕಿದ್ದಾಗಿ ಪದ್ಮಲತಾ ಪೊಲೀಸರಿಗೆ ದೂರು ನೀಡಿದ್ದಾರೆ.

ದೀಪಕ್ ಕುಮಾರ್ ನೊಂದಿಗೆ ದೀಪಿಕಾ ದಾಸ್ ಗೆ ಏಕೆ ಮದುವೆ ಮಾಡಿದಿರಿ. ಆತ ಮೋಸಗಾರ, ಅಕ್ರಮ ಚಟುವಟಿಕೆಯಲ್ಲಿ ಭಾಗಿಯಾಗಿದ್ದು, ಜೈಲಿಗೆ ಹೋಗಿ ಬಂದಿದ್ದಾನೆ ಎಂದು ಯಶವಂತ್ ಹೇಳಿದ್ದಾನೆ. ದೀಪಿಕಾ ದಾಸ್ ಅವರಿಗೂ ಕರೆ ಮಾಡಿ ನನಗೆ ಹಣ ಕೊಡಿ, ಇಲ್ಲದಿದ್ದರೆ ನಿಮ್ಮ ಹೆಸರು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಬೆದರಿಕೆ ಹಾಕಿದ್ದಾನೆ. ಕಳೆದ ಏಳು ತಿಂಗಳಿಂದ ದೀಪಿಕಾ ದಾಸ್, ಪದ್ಮಲತಾ ಹಾಗೂ ದೀಪಕ್ ಕುಮಾರ್ ಗೆ ಸಂಬಂಧಿಸಿದ ಅನೇಕರಿಗೆ ಕರೆ ಮಾಡಿ ಯಶವಂತ್ ಈ ರೀತಿ ಬೆದರಿಕೆ ಹಾಕಿದ್ದಾರೆ. ಪದ್ಮಲತಾ ದೂರು ನೀಡಿದ್ದು, ಮಾದನಾಯಕನಹಳ್ಳಿ ಠಾಣೆ ಪೊಲೀಸರು ದೂರು ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular