ಬೆಂಗಳೂರು: ಲಕ್ಷ್ಮಿ ದೇವತೆ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದ ಮೇಲೆ ಆರ್ಯವರ್ಧನ ಗುರೂಜಿ ವಿರುದ್ಧ ದೂರು ನೀಡಲಾಗಿದೆ.
ಬೆಂಗಳೂರಿನಲ್ಲಿ ಶಂಕರಪುರಂ ಪೊಲೀಸ್ ಠಾಣೆಗೆ ಕರ್ನಾಟಕ ಗೋರಕ್ಷಕರ ಸೇನೆಯಿಂದ ದೂರು ನೀಡಲಾಗಿದೆ. ಗುರೂಜಿ ಹೇಳಿಕೆಯಿಂದ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗಿದೆ. ಆರ್ಯವರ್ಧನ ಗುರೂಜಿ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಲಾಗಿದೆ.
ಸಂದರ್ಶನವೊಂದರಲ್ಲಿ ಲಕ್ಷ್ಮಿ ದೇವರ ಬಗ್ಗೆ ಗುರೂಜಿ ಹೇಳಿಕೆ ನೀಡಿದ್ದರು. ಸಾಮಾಜಿಕ ಜಾಲತಾಣದಲ್ಲಿ ಆರ್ಯವರ್ಧನ ಗುರೂಜಿ ಹೇಳಿಕೆ ವೈರಲ್ ಆಗಿದೆ. ಅವರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಶಂಕರಪುರಂ ಠಾಣೆಗೆ ಗೋವು ರಕ್ಷಕರ ಸೇನೆ ದೂರು ನೀಡಿದೆ. ದೂರು ಸ್ವೀಕರಿಸಿದ ಶಂಕರಪುರಂ ಠಾಣೆ ಪೊಲೀಸರು ವಿಡಿಯೋ ಪರಿಶೀಲನೆ ನಡೆಸಿದ್ದಾರೆ.

