HomeBusinessBIG NEWS: ವಿಸ್ತಾರಾ-ಏರ್ ಇಂಡಿಯಾ ವಿಲೀನಕ್ಕೆ ಅನುಮೋದನೆ

BIG NEWS: ವಿಸ್ತಾರಾ-ಏರ್ ಇಂಡಿಯಾ ವಿಲೀನಕ್ಕೆ ಅನುಮೋದನೆ

ನವದೆಹಲಿ: ಭಾರತೀಯ ಸ್ಪರ್ಧಾತ್ಮಕ ಆಯೋಗವು(CCI) ವಿಸ್ತಾರಾ ಟಾಟಾ SIA ಏರ್‌ಲೈನ್ಸ್ ಮತ್ತು ಏರ್ ಇಂಡಿಯಾದ ವಿಲೀನಕ್ಕೆ ಅನುಮೋದನೆ ನೀಡಿದೆ.

ಇದಲ್ಲದೆ, ಇದು ಏರ್ ಇಂಡಿಯಾದಲ್ಲಿ 25.1% ಪಾಲನ್ನು ಸ್ವಾಧೀನಪಡಿಸಿಕೊಳ್ಳಲು ವಿಸ್ತಾರಾದಲ್ಲಿ ಟಾಟಾ ಗ್ರೂಪ್‌ನ ಪಾಲುದಾರ ಸಿಂಗಾಪುರ್ ಏರ್‌ ಲೈನ್ಸ್‌ ಗೆ ಹಸಿರು ನಿಶಾನೆ ತೋರಿಸಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಟಾಟಾ ಸನ್ಸ್ ಮತ್ತು ಸಿಂಗಾಪುರ್ ಏರ್‌ಲೈನ್ಸ್ ನಡುವಿನ 51:49 ಜಂಟಿ ಉದ್ಯಮವಾಗಿ 2013 ರಲ್ಲಿ ಸ್ಥಾಪಿಸಲಾದ ಪೂರ್ಣ-ಸೇವಾ ವಿಮಾನಯಾನ ವಿಸ್ತಾರಾ, ಮಧ್ಯಪ್ರಾಚ್ಯ, ಏಷ್ಯಾ ಮತ್ತು ಯುರೋಪ್‌ನಾದ್ಯಂತ ಅಂತರರಾಷ್ಟ್ರೀಯವಾಗಿ ಕಾರ್ಯನಿರ್ವಹಿಸುತ್ತದೆ.

ವಿಸ್ತಾರಾ ಏರ್ ಇಂಡಿಯಾದೊಂದಿಗೆ ವಿಲೀನಗೊಳ್ಳುವ ಸಂದರ್ಭದಲ್ಲಿ, ಸಿಂಗಾಪುರ್ ಏರ್‌ಲೈನ್ಸ್ ಏರ್ ಇಂಡಿಯಾಕ್ಕೆ 2,059 ಕೋಟಿ ರೂ. ನೀಡಲಿದ್ದು, ಆ ಮೂಲಕ 25.1% ಪಾಲನ್ನು ಸ್ವಾಧೀನಪಡಿಸಿಕೊಳ್ಳುತ್ತದೆ ಎಂದು ಹೇಳಲಾಗಿದೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular