ಬೆಂಗಳೂರು: ಬೆಂಗಳೂರು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಪೊಲೀಸರ ಮಕ್ಕಳೊಂದಿಗೆ ದೀಪಾವಳಿ ಆಚರಿಸಿದ್ದಾರೆ.
ಚಾಮರಾಜಪೇಟೆಯ ಸಿಎಆರ್ ಮೈದಾನದಲ್ಲಿ ಹಬ್ಬ ಆಚರಣೆ ನಡೆದಿದ್ದು, ಸ್ವತಃ ಸೀಮಂತ್ ಕುಮಾರ್ ಸಿಂಗ್ ಅವರು ಪಟಾಕಿ ಹಚ್ಚಿದ್ದಾರೆ. ಬೆಂಗಳೂರು ಪಶ್ಚಿಮ ವಿಭಾಗದ ಪೊಲೀಸರಿಂದ ದೀಪಾವಳಿ ಹಬ್ಬ ಆಚರಣೆ ನಡೆಸಲಾಗಿದೆ. ದೀಪ ಬೆಳಗುವ ಮೂಲಕ ಚಾಲನೆ ನೀಡಿದ ಆಯುಕ್ತರು, ಮಕ್ಕಳಿಗೆ ಹಸಿರು ಪಟಾಕಿ, ಸಿಹಿ ವಿತರಿಸಿದ್ದಾರೆ. ದೀಪಾವಳಿ ಹಬ್ಬ ಆಚರಣೆಯಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳು ಭಾಗಿಯಾಗಿದ್ದಾರೆ.
ಈ ದಿನ ದೀಪಾವಳಿ ಹಬ್ಬದ ಪ್ರಯುಕ್ತ @jbnagartrfps ಠಾಣಾ ವ್ಯಾಪ್ತಿಯಲ್ಲಿರುವ ಪೊಲೀಸ್ ವಸತಿ ಗೃಹಕ್ಕೆ ಭೇಟಿ ನೀಡಿ, ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಹಾಗೂ ಕುಟುಂಬಗಳ ಸದಸ್ಯರುಗಳ ಜೊತೆಗೆ ಸಡಗರ ಮತ್ತು ಸಂಭ್ರಮದಿಂದ ಸಿಹಿ ವಿತರಿಸುವ ಮೂಲಕ ದೀಪಾವಳಿ ಹಬ್ಬವನ್ನು ಆಚರಿಸಲಾಯಿತು. pic.twitter.com/OY8AblhKRg
— DCP Traffic East ಉಪ ಪೊಲೀಸ್ ಆಯುಕ್ತರು ಸಂಚಾರ ಪೂರ್ವ (@DCPTrEastBCP) October 21, 2025
"ನಾಡಿನ ಸಮಸ್ತ ಜನರಿಗೆ #HappyDeepawali" ನೈರುತ್ಯ ವಿಭಾಗದ #ಕೆಂಗೇರಿ #ಸುಬ್ರಮಣ್ಯಪುರ ಪೊಲೀಸ್ ವಸತಿಗೃಹಗಳಿಗೆ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳು ಭೇಟಿನೀಡಿ ಪೊಲೀಸ್ ಕುಟುಂಬದವರ ಜೊತೆ ದೀಪಾವಳಿ ಹಬ್ಬವನ್ನು ಆಚರಿಸಿ, ದೀಪಾವಳಿಯ ದಿವ್ಯ ಬೆಳಕು ಎಲ್ಲರ ಜೀವನದಲ್ಲಿ ಆರೋಗ್ಯ, ಸಮೃದ್ಧಿ ಮತ್ತು ಸಂತೋಷವನ್ನು ತರಲಿ ಎಂದು ಶುಭ ಕೋರಲಾಯಿತು. pic.twitter.com/2zYeS0xn4U
— DCP South-West Bengaluru City (@DCPSOUTHWESTBCP) October 21, 2025