ಆಟವಾಡುವ ಸಂದರ್ಭದಲ್ಲಿ ಹಲವು ತಮಾಷೆಯ ಘಟನೆಗಳು ನಡೆಯುತ್ತಿರುತ್ತವೆ. ಅಂತಹ ಕ್ಷಣಗಳ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ಮೂಲಕ ನೋಡುಗರಿಗೆ ಮನರಂಜನೆ ನೀಡುತ್ತವೆ. ಅಂತವುದೇ ಒಂದು ವಿಡಿಯೋ ಈಗ ಫುಲ್ ವೈರಲ್ ಆಗಿದೆ.
ಮೈದಾನದಲ್ಲಿ ಹುಡುಗರು ಕ್ರಿಕೆಟ್ ಆಡುತ್ತಿರುತ್ತಾರೆ. ಅವರೆಲ್ಲರೂ ಬಿಳಿ ಬಣ್ಣದ ಪ್ಯಾಂಟ್ – ಶರ್ಟ್ ಹಾಕಿದ್ದು ನೋಡಿದರೆ ಯಾವುದೋ ಪ್ರಮುಖ ಟೂರ್ನಮೆಂಟ್ ನಡೆಯುತ್ತಿರುವಂತೆ ಕಾಣುತ್ತದೆ.
ಈ ಸಂದರ್ಭದಲ್ಲಿ ಬೌಲರ್ ಹಾಕಿದ ಬಾಲನ್ನು ಬ್ಯಾಟ್ಸ್ಮನ್ ಹೊಡೆದಿದ್ದು ಅದು ಸಮೀಪದಲ್ಲೇ ಇದ್ದ ಆಟಗಾರನ ಕೈ ಸೇರುತ್ತದೆ. ಆದರೆ ಮತ್ತೊಂದು ಬದಿಯಲ್ಲಿದ್ದ ಬ್ಯಾಟ್ಸ್ ಮನ್ ರನ್ ಗಳಿಕೆಗಾಗಿ ಇತ್ತ ಓಡಿ ಬಂದಿದ್ದು, ಇಬ್ಬರು ಬ್ಯಾಟ್ಸ್ಮನ್ ಗಳು ಒಂದೇ ಬದಿಯಲ್ಲಿ ಉಳಿದಿದ್ದಾರೆ.
ತನ್ನ ಬಳಿಗೆ ಬಂದ ಬಾಲನ್ನು ಫೀಲ್ಡರ್, ವಿಕೆಟ್ ಬಳಿ ಇದ್ದವನಿಗೆ ಔಟ್ ಮಾಡಲು ಎಸೆದಿದ್ದು, ಆದರೆ ಈ ಪ್ರಯತ್ನ ವಿಫಲವಾಗುತ್ತದೆ. ಹೀಗೆ ಔಟ್ ಮಾಡಲು ಹಲವು ಅವಕಾಶಗಳಿದ್ದರೂ ಸಹ ಎದುರಾಳಿಗಳು ಗೊಂದಲ ಮಾಡಿಕೊಂಡು ಇದರಲ್ಲಿ ವಿಫಲರಾಗುತ್ತಾರೆ. ಅಂತಿಮವಾಗಿ ಒಂದೇ ಬದಿಯಲ್ಲಿದ್ದ ಬ್ಯಾಟ್ಸ್ಮನ್ ಗಳ ಪೈಕಿ ಒಬ್ಬ ಮತ್ತೆ ತೆರಳಿ ಔಟ್ ಆಗುವುದರಿಂದ ತಪ್ಪಿಸಿಕೊಂಡಿದ್ದಾನೆ. ಈ ವಿಡಿಯೋ ನೋಡುಗರಲ್ಲಿ ನಗೆ ಉಕ್ಕಿಸಿದೆ.
https://twitter.com/RichKettle07/status/1795105439199195539?ref_src=twsrc%5Etfw%7Ctwcamp%5Etweetembed%7Ctwterm%5E1795105439199195539%7Ctwgr%5E108bdc6c5553a78bdd22ee7ca9525b576bc320dd%7Ctwcon%5Es1_&ref_url=https%3A%2F%2Fwww.latestly.com%2Fsocially%2Fsports%2Fcricket