HomeLatest NewsBREAKING: 70 ಕ್ವಿಂಟಾಲ್ ಕಾಫಿ ಕಳ್ಳತನ: ಐವರು ಆರೋಪಿಗಳು ಅರೆಸ್ಟ್

BREAKING: 70 ಕ್ವಿಂಟಾಲ್ ಕಾಫಿ ಕಳ್ಳತನ: ಐವರು ಆರೋಪಿಗಳು ಅರೆಸ್ಟ್

ಕೊಡಗು: 70 ಕ್ವಿಂಟಾಲ್ ಕಾಫಿ ಕಳ್ಳತನ ಮಾಡಿದ್ದ ಐವರು ಆರೋಪಿಗಳನ್ನು ಕೊಡಗು ಜಿಲ್ಲೆಯ ಕುಶಾಲನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಸುನೀಲ್, ರಾಜು, ಶರತ್, ದಿನೇಶ್, ಜಿತೇಂದ್ರ ಬಂಧಿತ ಆರೋಪಿಗಳು. ಕೊಡಗು ಜಿಲ್ಲೆಯ ಕುಶಾಲನಗರ ತಾಲೂಕಿನ ಕೂಡ್ಲೂರಿನಲ್ಲಿ ಕಳ್ಳತನ ಪ್ರಕರಣ ನಡೆದಿತ್ತು.

ಉಮಾಕಾಫಿ ವರ್ಕ್ಸ್ ನಲ್ಲಿ ಆರೋಪಿಗಳು 18 ಲಕ್ಷ ಮೌಲ್ಯದ ಕಾಫಿ ಕಳ್ಳತನ ಮಾಡಿದ್ದರು. ಕುಶಾಲನಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಸದ್ಯ ಐವರು ಆರೋಪಿಗಳನ್ನು ಬಂಧಿಸಲಾಗಿದ್ದು, ಬಂಧಿತರಿಂದ 6,495ಕೆಜಿ ಕಾಫಿ, ಮೂರು ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular