HomeKarnatakaBIG NEWS : ಡಿ.ಕೆ ಸುರೇಶ್ ಸೋಲಿಗೆ ಸಿಎಂ ಸಿದ್ದರಾಮಯ್ಯ & ಟೀಮ್ ಕಾರಣ :...

BIG NEWS : ಡಿ.ಕೆ ಸುರೇಶ್ ಸೋಲಿಗೆ ಸಿಎಂ ಸಿದ್ದರಾಮಯ್ಯ & ಟೀಮ್ ಕಾರಣ : ಶಾಸಕ ಸುರೇಶ್ ಗೌಡ ಸ್ಪೋಟಕ ಹೇಳಿಕೆ

ತುಮಕೂರು : ಡಿ.ಕೆ ಸುರೇಶ್ ಸೋಲಿಗೆ ಸಿಎಂ ಸಿದ್ದರಾಮಯ್ಯ & ಟೀಮ್ ಕಾರಣ ಎಂದು ಬಿಜೆಪಿ ಶಾಸಕ ಸುರೇಶ್ ಗೌಡ ಸ್ಪೋಟಕ ಹೇಳಿಕೆ ನೀಡಿದ್ದಾರೆ.

ಇಂದು ಸುದ್ದಿಗಾರರ ಜೊತೆ ಮಾತನಾಡಿದ ಸುರೇಶ್ ಗೌಡ ಡಿ.ಕೆ ಸುರೇಶ್ ಸೋಲಿಗೆ ಸಿಎಂ ಸಿದ್ದರಾಮಯ್ಯ & ಟೀಮ್ ಕಾರಣ. ಸಿಎಂ ಸಿದ್ದರಾಮಯ್ಯನವರೇ ಸಿಎಂ ಆಗಿ ಮುಂದುವರೆಯಬೇಕೆಂದು ಸಂಚು ರೂಪಿಸಲಾಗಿದೆ. ಸಿದ್ದರಾಮಯ್ಯರ ಜೊತೆ ಇರುವ ಅಹಿಂದ ಟೀಮ್ ಸಂಚು ರೂಪಿಸಿ ಡಿಕೆ ಸುರೇಶ್ ಅವರನ್ನು ಸೋಲಿಸಿದ್ದಾರೆ ಎಂದು ಗಂಭೀರವಾಗಿ ಆರೋಪಿಸಿದರು.

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇರಲ್ಲ, ಡಿಕೆ ಶಿವಕುಮಾರ್ ಸಿಎಂ ಕೂಡ ಆಗಲ್ಲ. ಈಗಾಗಲೇ ಕಾಂಗ್ರೆಸ್ ನಾಯಕರ ನಡುವೆ ಕಿತ್ತಾಟ ಶುರುವಾಗಿದೆ. ಈ ಸರ್ಕಾರ ಬಹಳ ದಿನ ಉಳಿಯಲ್ಲ ಎಂದರು. ಶೀಘ್ರದಲ್ಲೇ ಸರ್ಕಾರ ಪತನವಾಗಲಿದೆ ಎಂದು ಸುರೇಶ್ ಗೌಡ ಹೇಳಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಜಾರಕಿಹೊಳಿ ಸತೀಶ್ ಅವರನ್ನು ಡಿಸಿಎಂ ಡಿಕೆ ಶಿವಕುಮಾರ್ ಹುಚ್ಚಾಸ್ಪತ್ರೆಗೆ ಕಳುಹಿಸುತ್ತಾರಂತೆ!!

ಜಾರಕಿಹೊಳಿ ಸತೀಶ್ ಅವರನ್ನು ಡಿಸಿಎಂ ಡಿಕೆ ಶಿವಕುಮಾರ್ ಹುಚ್ಚಾಸ್ಪತ್ರೆಗೆ ಕಳುಹಿಸುತ್ತಾರಂತೆ!!
ಸಿಎಂ ಸಿದ್ದರಾಮಯ್ಯ ಬಣದ ಲೋಕೋಪಯೋಗಿ ಸಚಿವ ಜಾರಕಿಹೊಳಿ ಸತೀಶ್ ಅವರನ್ನು ಡಿಸಿಎಂ ಡಿಕೆ ಶಿವಕುಮಾರ್ ಹುಚ್ಚಾಸ್ಪತ್ರೆಗೆ ಕಳುಹಿಸುತ್ತಾರಂತೆ!! ಲೂಟಿ ಹೊಡೆಯುವಲ್ಲಿ ದೋಸ್ತಿಗಳಾಗಿದ್ದ ಕಾಂಗ್ರೆಸ್ ಸದಸ್ಯರು, ಈಗ ಚುನಾವಣೆ ಸೋತ ನಂತರ ಅಕ್ಷರಶಃ ತೂ ತೂ ಮೈ ಮೈ ರೀತಿ ಹಾದಿ ಬೀದಿಯಲ್ಲಿ ಕಚ್ಚಾಟದಲ್ಲಿ ನಿರತರಾಗಿದ್ದಾರೆ. ಒಂದು ವರ್ಷ ಕರ್ನಾಟಕವನ್ನು ಅಭಿವೃದ್ಧಿ ಶೂನ್ಯವನ್ನಾಗಿಸಿದ ಕಾಂಗ್ರೆಸ್, ಹಾದಿ ಬೀದಿ ರಂಪಾಟಕ್ಕೆ ಈ ವರ್ಷವನ್ನು ಮೀಸಲಿಡುತ್ತದೆ ಎಂಬುದು ಖಚಿತ-ನಿಶ್ಚಿತ-ಖಂಡಿತ ಎಂದು ಬಿಜೆಪಿ ಕಿಡಿಕಾರಿದೆ.

 

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular